ಬಳ್ಳಾರಿ: ತೀವ್ರ ಮಳೆಯಿಂದಾಗಿ ಮೆಣಸಿನಕಾಯಿ ಗಿಡಗಳು ಹಾನಿಯಾಗಿದ್ದರಿಂದ ನೊಂದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಗಾದಿಲಿಂಗ ಅಲಿಯಾಸ್ ದರೂರು (28) ಎಂದು ಗುರುತಿಸಲಾಗಿದೆ. 5 ಎಕರೆ ಹೊಲವನ್ನು ಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆ ಬೆಳೆದಿದ್ದ ಇವರು, ಪ್ರತಿ ಎಕರೆಗೆ 1.10 ಲಕ್ಷ ರೂ ಖರ್ಚು ಮಾಡಿದ್ದರು. ಇದಕ್ಕಾಗಿ 6 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.
ಮನೆಯನ್ನು ಅಡಮಾನ ವಿಟ್ಟು 4 ಲಕ್ಷ ಮತ್ತು 100 ಕ್ಕೆ 2 ರೂಪಾಯಿಯ ಬಡ್ಡಿ ದರದಂತೆ 2 ಲಕ್ಷ ಕೈಸಾಲ ಪಡೆದಿದ್ದರು ಎನ್ನಲಾಗಿದೆ. ಈ ಬಾರಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಇದರಿಂದ ದಿಕ್ಕು ತೋಚದಂತಾಗಿ ಗುರುವಾರ ಮಧ್ಯಾಹ್ನ ಹೆಂಡತಿ- ಮಕ್ಕಳ ಜತೆ ಹೊಲಕ್ಕೆ ಹೋಗಿದ್ದ ಗಾದಿಲಿಂಗ ಅವರನ್ನು ಅಲ್ಲಿಯೇ ಬಿಟ್ಟು, ಏಕಾಂಗಿಯಾಗಿ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700