ಹೆಚ್.ಡಿ.ಕೋಟೆ: ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ವಾಮಿ ವಿವೇಕಾನಂದರ ಯೂಥ್ ಮೂವ್ ಮೆಂಟ್ ಸಹಯೋಗದೊಂದಿಗೆ ಮಳೆ ನೀರು ಸಂಗ್ರಹಣಾ ಘಟಕವನ್ನು ನಿರ್ಮಿಸಲಾಯಿತು.
ಡಾ ಜಿ ಎಸ್ ಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವಾಮಿ ವಿವೇಕಾನಂದ ಸ್ಮಾರಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲೆಯ ಅವರಣದಲ್ಲಿ ಘಟಕದಲ್ಲಿ ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಿ ಕೊಂಡು ನೀರನ್ನು ಮಿತಿಯಾಗಿ ಬಳಸಿ ಹಾಗೂ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಾಲವನ್ನು ಹೆಚ್ಚಿಸಿ. ಹರಿಯುವ ನೀರನ್ನು ನಿಲ್ಲಿಸಿ ನಿಂತ ನೀರನ್ನು ಇಂಗಿಸಿ ಎಂದು ಸಲಹೆ ನೀಡಿದರು.
ಗ್ರಾಮದ ಯಾಜಮಾನ ಹೂವನಾಯಕ ಮಾತನಾಡಿ, ನಮ್ಮ ಊರಿನ ಶಾಲೆಯಲ್ಲಿ ಮಳೆ ನೀರು ಹರಿಯುತ್ತಿತ್ತು. ಅದಕ್ಕೆ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ರವರು ನಮ್ಮ ಊರಿನ ಶಾಲೆಗೆ ಮಳೆ ಸಂಗ್ರಹಣಾ ಘಟಕವನ್ನು ನಿರ್ಮಾಣ ಮಾಡುತ್ತೀವಿ ಎಂದು ಮುಂದೆ ಬಂದರು. ನೀರನ್ನು ಸಂಗ್ರಹಣಾ ಮಾಡಿದರೆ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಮತ್ತು ಅಂತರ್ಜಾಲದಲ್ಲಿ ನೀರಿನ ಪ್ರಮಾಣ ಕಡಿಮೆವಾದರೆ ಮಳೆ ನೀರು ಘಟಕದಿಂದ ಉಪಯೋಗವಾಗುತ್ತದೆ ಎಂದರು.
ಸಭೆಯಲ್ಲಿ ಡಾ.ಜಿ.ಎಸ್.ಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವಾಮಿ ವಿವೇಕಾನಂದ ಆಸ್ಪತ್ರೆ ಸರಗೂರು, ಮಹದೇವಯ್ಯ ಕ್ಷೇತ್ರ ಸಂಪನ್ಮೂಲ ಸಮನ್ವಾಧಿಕಾರಿ ಹೆಚ್ ಡಿ ಕೋಟೆ, ರತ್ನಮ ಶಿವಪ್ಪ ಗ್ರಾಪಂ ಉಪಾಧ್ಯಕ್ಷೆ ಬಿದರಹಳ್ಳಿ, ಬಸಾಪುರ ಗ್ರಾಮದ ಯಾಜಮಾನರು ಹೂವನಾಯಕ ಜೆ.ಕೆ., ಎಸ್ ಡಿ ಎಂ ಸಿ ಅಧ್ಯಕ್ಷ ಗೋವಿಂದ ಸ ಹಿ ಪ್ರಾ ಶಾಲೆ ಬಸಾಪುರ, ಕಿರಣ್ ವಲಯ ಸಂಪನ್ಮೂಲ ಎನ್ ಬೇಗೂರು, ಕಾಳನಾಯಕ, ಶಿವಣ್ಣನಾಯಕ, ಅಂಕನಾಯಕ ಎಸ್ಡಿಎಂಸಿ ಉಪಾಧ್ಯಕ್ಷ, ಅಂಕಯ್ಯ ಮುಖ್ಯ ಶಿಕ್ಷಕರು, ದೇವಣಿ, ಚನ್ನನಾಯಕ ಗ್ರಾಪಂ ಸದಸ್ಯರು ಹಾಗೂ ಶಾಲೆಯ ಮಕ್ಕಳು ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700