ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಕಾರ್ಮೋರೆಂಟ್ ಹಾಗೂ ಈಗ್ರೆಟ್ ಜಾತಿಯ ಪಕ್ಷಿಗಳನ್ನ ಕೊಂದಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಇದೇ ಗ್ರಾಮದ ರವಿ ಬಂಧಿತ ಆರೋಪಿ.
ಸಿಂದುವಳ್ಳಿ ಗ್ರಾಮದ ಸಮೀಪ ಮರದಲ್ಲಿ ಕಾರ್ಮೋರೆಂಟ್ ಮತ್ತು ಈಗ್ರೆಟ್ ಪಕ್ಷಿಗಳು ಗೂಡು ಕಟ್ಟಿದ್ದವು. ಈ ವೇಳೆ ಅದೇ ಗ್ರಾಮದ ಬಂಧಿತ ಆರೋಪಿ ರವಿ ಗೂಡನ್ನ ಕಿತ್ತು ಹಾಕಿ. 24ಮರಿಗಳನ್ನ ಸಾಯಿಸಿ, 7 ಮರಿಗಳಿಗೆ ಗಾಯಗೊಳಿಸಿದ್ದ. ಗಾಯಗೊಂಡಿದ್ದ ಮರಿಗಳಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಅರಣ್ಯಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ RFO ಸುರೇಂದ್ರ, DRFO ಮೋಹನ್ ಕುಮಾರ್, ಗಸ್ತುಪಾಲಕ ರಾಜೇಗೌಡ, ಚಾಲಕ ಗಣೇಶ್ ಭಾಗಿಯಾಗಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


