ಪಾವಗಡ: ವಿದ್ಯುತ್ ಶಾಕ್ ನಿಂದಾಗಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ಪಾವಗಡ ಪಟ್ಟಣದ ವೇಣುಗೋಪಾಲ ದೇವಸ್ಥಾನದ ರಸ್ತೆ ಸಮೀಪದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ನಡೆದಿದೆ.
ಪಾರ್ಸಿಲಾಲ್ ಎನ್ನುವ ವ್ಯಕ್ತಿ ರಾಜಸ್ಥಾನದ ಮೂಲದವರಾಗಿದ್ದು ಕಳೆದ 13 ವರ್ಷಗಳಿಂದ ಪಾವಗಡದಲ್ಲಿ ಸ್ವೀಟ್ ಅಂಗಡಿಯನ್ನು ತೆರೆದು ಜೀವನವನ್ನು ನಡೆಸುತ್ತಿದ್ದರು. ಪ್ರತಿನಿತ್ಯದಂತೆ ಇಂದು ಸಹ ತನ್ನ ಸ್ವೀಟ್ ಗಾಡಿಯಲ್ಲಿರುವ ಬ್ಯಾಟರಿಗೆ ಚಾರ್ಜ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಮೃತ ಪಾರ್ಸಿಲಾಲ್ ಅವರಿಗೆ ಹೆಂಡತಿ ಮತ್ತು ಮೂರು ಜನ ಮಕ್ಕಳಿದ್ದು, ಇವರ ಅಂತ್ಯಕ್ರಿಯೆಗಳು ಪಾವಗಡದಲ್ಲೇ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಈ ಘಟನೆ ಸಂಬಂಧಪಟ್ಟು ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296