ಬೆಂಗಳೂರು: ಕಾರೊಂದು ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಲಾಗಿದೆ. ಆದ್ರೆ ಸಂಜೆಯಾದ್ರೂ ಕಾರಿನಿಂದ ಯಾರೂ ಇಳಿದಿರಲಿಲ್ಲ. ಇದರಿಂದ ಅನುಮಾನಗೊಂಡ ಬೀಡದ ಅಂಗಡಿಯ ವ್ಯಕ್ತಿ ಸ್ಥಳೀಯರ ಗಮನ ಸೆಳೆದು ಕಾರಿನ ಬಳಿ ಹೋದ ವೇಳೆ ಆಘಾತ ಕಾದಿತ್ತು.
37 ವರ್ಷ ವಯಸ್ಸಿನ ಸಂತೋಷ್ ಪ್ರಸಾದ್ ಇಂದಿರಾನಗರಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದರು. ಗುರುವಾರ ಬೆಳಗ್ಗೆ ತಮ್ಮ ಕಚೇರಿಗೆಂದು ಕಾರಿನಲ್ಲಿ ತೆರಳಿದ್ದರು. ಅವರು ಹೈ ಶುಗರ್ನಿಂದ ಬಳಲುತ್ತಿದ್ದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದರು. ಆದರೆ ಸಂಜೆಯಾದ್ರೂ ಅವರು ಕಾರಿನಿಂದ ಇಳಿದಿರಲಿಲ್ಲ.
ಈ ಸ್ಥಳಕ್ಕೆ ಸ್ವಲ್ಪ ದೂರದಲ್ಲಿದ್ದ ಬೀಡಾದ ಅಂಗಡಿಯ ವ್ಯಕ್ತಿ ಇದನ್ನು ಗಮನಿಸಿ ಅನುಮಾನದಿಂದ ಕಾರಿನ ಸಮೀಪ ಹೋಗಿದ್ದು, ಒಳಗಿದ್ದ ವ್ಯಕ್ತಿಯನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕಾರಿನ ಗ್ಲಾಸ್ ಒಡೆದು ನೋಡಿದ ವೇಳೆ ಸಂತೋಷ್ ಮೃತಪಟ್ಟಿರುವುದು ತಿಳಿದು ಬಂದಿದೆ. ತಕ್ಷಣವೇ ಪೊಲೀಸರಿಗೆ ಅವರು ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಹೆಚ್ಎಎಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿ ಸಿಕ್ಕ ಐಡಿ ಕಾರ್ಡ್, ಕಾರ್ ನಂಬರ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4