ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕರೆ ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೆಮಲ್ಲೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮದ ವಾಸಿ ಚಿಕ್ಕಮ್ಮ ಲೇಟ್ ವಜ್ರಯ್ಯ ಎಂಬುವರ ಮನೆ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಹಾನಿಗೀಡಾಗಿದ್ದು ಸುಮಾರು ಎರಡರಿಂದ ಮೂರು ಲಕ್ಷ ಗೃಹಬಳಕೆ ವಸ್ತುಗಳು ಆಹಾರ ಪದಾರ್ಥಗಳು ಹಾನಿಯಾಗಿದೆ.
ಚಿಕ್ಕಮ್ಮನವರು ಸುಮಾರು ರಾಜಕೀಯ ಮುಖಂಡರುಗಳು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಯಾವುದೇ ಕೆಲಸ ಮಾಡುತ್ತಿಲ್ಲ ಅವರಿಗೆ ಬೇಕಾದ ರೀತಿಯಲ್ಲಿ ಬೇಕಾದ ಅಂತವರಿಗೆ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರು ಕೂಡ ನಮಗೆ ಯಾವುದೇ ಅನುಕೂಲ ಮಾಡುತ್ತಿಲ್ಲ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ರಾಜಕೀಯ ವ್ಯಕ್ತಿಗಳು ಮುಖಂಡರುಗಳು ಅವರಿಗೆ ಬೇಕಾಗಿರುವ ವೋಟು ಕೇಳುವುದಕ್ಕೆ ಮಾತ್ರ ನಮ್ಮ ಮನೆ ಬಳಿ ಬರುತ್ತಾರೆ ಇದ್ದಂತೆ ನಮ್ಮ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲ ನಮ್ಮ ಕಷ್ಟವನ್ನು ನಾವು ಯಾರಿಗೆ ಹೇಳಿಕೊಳ್ಳಬೇಕು ಮಾನ್ಯ ಮುಖ್ಯಮಂತ್ರಿಗಳೇ ಬಡ ಜನಗಳ ಕಷ್ಟವನ್ನು ಸ್ವಲ್ಪ ನೋಡಿ ಇಂದು ಚಿಕ್ಕಮ್ಮ ನವರು ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲಾ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ದೂರು ನೀಡಿದರೂ, ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ತಿಪಟೂರು ಎಸಿರವರಿಗೂ ದೂರವಾಣಿ ಮುಖಾಂತರ ಕರೆ ಮಾಡಿದಾಗ ಅವರೂ ಸ್ಪಂದಿಸಿಲ್ಲ. ತುರುವೇಕೆರೆ ತಾಲೂಕು ದಂಡಾಧಿಕಾರಿಗಳು ತಹಸೀಲ್ದಾರ್ ಅವರಿಗೆ ದೂರವಾಣಿ ಮುಖಾಂತರ ತಿಳಿಸಿದಾಗ ಅವರು, ನಾನು ಬರುವುದಕ್ಕೆ ಆಗುವುದಿಲ್ಲ, ವಿಎ ಗ್ರಾಮ ಲೆಕ್ಕ ಅಧಿಕಾರಿ ಭೂತೇಶ್ ಅವರನ್ನು ಕಳುಹಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ ಈವರೆಗೆ ಹುಲಿಕಲ್ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಯಾರು ಕೂಡ ಇದುವರೆಗೂ ಬಂದಿಲ್ಲ. ದಯವಿಟ್ಟು ಸಂಬಂಧಪಟ್ಟ ಇಲಾಖೆ ಈ ಕೂಡಲೇ ಗಮನ ಹರಿಸಿ ಪರಿಹಾರ ನೀಡಬೇಕೆಂದು ವಿನಂತಿ ಅವರು ವಿನಂತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇಂದು ಬೆಳಿಗ್ಗೆ ಆಗಮಿಸಿದ Eo ಕಾರ್ಯನಿರ್ವಣಾಧಿಕಾರಿ ಸತೀಶ್ ರವರು ಆಗಮಿಸಿ ವೀಕ್ಷಣೆ ಮಾಡಿದ್ದಾರೆ ಮತ್ತು ಪಿಡಿಒ ರವರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700