ತಿಪಟೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಪಟಾಕಿ ಹಣತೆಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕೊವಿಡ್ ಸಂಕಷ್ಟಗಳೆಲ್ಲವನ್ನೂ ಮೀರಿ ಎಲ್ಲ ಮನೆಗಳಲ್ಲಿಯೂ ಈ ಬಾರಿ ಸಂತಸ ಸಡಗರ ಕಂಡು ಬಂದಿದೆ. ಇಂದು ಬೆಳಗ್ಗಿನಿಂದಲೇ ಮನೆ ಮನೆಗಳಲ್ಲಿ ದೀಪಾವಳಿ ಸಂಭ್ರಮ ಕಾಣಿಸಿತು.
ಇನ್ನೂ ಪಟಾಕಿ ಖರೀದಿಗೆ ಜನರು ಮುಗಿ ಬಿದ್ದಿದ್ದು, ಈ ಬಾರಿ ಪಟಾಕಿ ಬೆಲೆ ಏರಿಕೆಯಾಗಿದ್ದರೂ ಕೂಡ ಪಟಾಕಿ ಖರೀದಿ ಕಡಿಮೆಯಾಗಿಲ್ಲ. ಕಳೆದ ವರ್ಷವೂ ಕೊವಿಡ್ ನಿಂದಾಗಿ ದೀಪಾವಳಿ ಸಂಭ್ರಮ ಇರಲಿಲ್ಲ. ಹೀಗಾಗಿ ಈ ಬಾರಿ ಜನರು ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಮುಂದಾಗಿದ್ದಾರೆ.
ನಗರದ ಕಳೆ ತ್ರಿಮೂರ್ತಿ ಥಿಯೇಟರ್ ಬಳಿಯ ಅಂಗಡಿಗಳಲ್ಲಿ ಪಟಾಕಿ ಅಂಗಡಿಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ಪಟಾಕಿ ಖರೀದಿಗೆ ಮುಗಿ ಬಿದ್ದಿರುವುದು ಕಂಡು ಬಂದಿದೆ. ಏನೇ ಆಗಲಿ ಸಾರ್ವಜನಿಕರು ಪಟಾಕಿ ಹಚ್ಚುವ ವೇಳೆ ಎಚ್ಚರಿಕೆಯಿಂದ ಇರುವುದು ಉತ್ತಮ. ಪ್ರತೀ ವರ್ಷವೂ ಪಟಾಕಿಯಿಂದ ನಾನಾ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಪಟಾಕಿ ಹಚ್ಚುವ ವೇಳೆ ಎಚ್ಚರದಿಂದಿರುವುದು ಅಗತ್ಯವಾಗಿದೆ.
ವರದಿ: ಮಂಜು ಗುರುಗದಹಳ್ಳಿ.