ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿ ಮಸ್ಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಂಜುಳಾ ವೀರೇಶ್ ಅವರನ್ನು ಗ್ರಾಮದ ಗ್ರಾಮಸ್ಥರು ಇಂದು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುಳಾ ವೀರೇಶ್, ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮೊದಲನೆಯದಾಗಿ ಕೋವಿಡ್ ನಿಯಂತ್ರಣಕ್ಕೆ ಒತ್ತು ಕೊಡುವುದು ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬೆಳಕು(ವಿದ್ಯುತ್) ಒದಗಿಸಿಕೊಡುತ್ತೇನೆ.
ಸರ್ಕಾರದಿಂದ ಬರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಎಲ್ಲ ಗ್ರಾಮಸ್ಥರಿಗೂ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಸ್ಕಲ್ ಗ್ರಾಮದ ಉಪಾಧ್ಯಕ್ಷರಾದ ವೈ .ನಾಗರಾಜು ಮಾತನಾಡಿದರು. ಬಳಿಕ ಅಧ್ಯಕ್ಷೆ ಮಂಜುಳಾ ವೀರೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು .
ಈ ಸಂದರ್ಭ ಸದಸ್ಯರಾದ ಕಲಾವತಿ, ತಿಪ್ಪೇಸ್ವಾಮಿ, ಕೊಲ್ಲಮ್ಮ, ರಮ್ಯ, ಹನುಮಂತಪ್ಪ, ಗೋವಿಂದರಾಜು, ಕಲಾವತಿ, ವಿ.ಎಲ್.ಗೌಡ, ಹರೀಶ್, ಸುಜಾತ, ಪದ್ಮಾವತಿ, ಮಣಿಮೇಗಲೈ, ಗಿರಿಜಮ್ಮ, ಪದ್ಮಾವತಿ ನೂತನ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಮಸ್ಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸ್ಥಾನಕ್ಕೆ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು, ಮಾಜಿ ಸಚಿವರಾದ ಡಿ .ಸುಧಾಕರ್ ಬೆಂಬಲಿತ ಮಂಜುಳಾ ವೀರೇಶ್ ಅವರು ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy