ಬೆಂಗಳೂರು: ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಪುತ್ರ ಮನುರಂಜನ್ ರವಿಚಂದ್ರನ್ ಅವರ ನಟನೆಯ ‘ಮುಗಿಲ್ ಪೇಟೆ’ ಚಿತ್ರಕ್ಕೆ ಚಿತ್ರ ಪ್ರೇಕ್ಷಕ ಫಿದಾ ಆಗಿದ್ದು, ಸಿನಿಮಾ ಸಕ್ಸಸ್ ಆಗಿದೆ ಎಂದು ಚಿತ್ರ ವೀಕ್ಷಿಸಿದ ಸಿನಿಪ್ರಿಯರು ಹೇಳಿದ್ದು, ಈ ಚಿತ್ರ 100 ಡೇಸ್ ಓಡುವುದರಲ್ಲಿ ಅನುಮಾನವಿಲ್ಲ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.
ನವಿರಾದ ಪ್ರೇಮ ಕಥೆ, ಕಚಗುಳಿ ಇಡುವ ಹಾಸ್ಯ ದೃಶ್ಯಗಳು, ಪ್ರೀತಿ, ಯುದ್ಧ ಹೀಗೆ ಕಥೆಯು ಸರಾಗವಾಗಿ ಸಾಗುತ್ತಲೇ ಇರುತ್ತದೆ. ಎಲ್ಲಿ ಕೂಡ ಪ್ರೇಕ್ಷಕನಿಗೆ ಬೋರ್ ಹೊಡೆಸುವುದಿಲ್ಲ ಎಂದು ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುತ್ತಿದ್ದಂತೆಯೇ ಸಿನಿ ಪ್ರಿಯರು ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು, ನಟಿ ತಾರಾ, ಅವಿನಾಶ್, ಸಾಧುಕೋಕಿಲಾ, ರಂಗಾಯಣ ರಘು, ರಿಷಿ ಹಾಗೂ ಚಿತ್ರದ ನಾಯಕಿ ಕಯಾದು ಚಿತ್ರಕ್ಕೆ ಬಲ ತುಂಬಿದ್ದಾರೆ. ಮನುರಂಜನ್ ಅವರ ಅಭಿನಯದ ಬಗ್ಗೆ ನೋ ಕಮೆಂಟ್ಸ್ ಎಂದೇ ಹೇಳಬಹುದು.
ಮನುರಂಜನ್ ಅವರನ್ನು ನೋಡಿದರೆ, ರವಿ ಚಂದ್ರನ್ ತಮ್ಮ ಯವ್ವನದಲ್ಲಿ ಹೇಗೆ ಕಾಣುತ್ತಿದ್ದಾರೋ ಹಾಗೆಯೇ ಕಾಣುತ್ತಿದ್ದಾರೆ. ಚಿತ್ರ ನೋಡಿ ರವಿ ಚಂದ್ರನ್ ಅವರೇ ತೆರೆಯ ಮೇಲಿದ್ದಾರೋ ಅಂದುಕೊಂಡ್ವಿ ಎಂದು ಸಿನಿಪ್ರಿಯರು ಅಭಿಪ್ರಾಯಪಟ್ಟರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700