nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸೋಲಾರ್ ವಾಟರ್ ಹೀಟರ್ ಖರೀದಿ : ಟೆಂಡರ್ ಆಹ್ವಾನ

    June 15, 2025

    ಪಾಲಿಕೆ : ಐಇಸಿ ಚಟುವಟಿಕೆಗಾಗಿ ಎಸ್‌ ಹೆಚ್‌ ಜಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

    June 15, 2025

    ಸಾಲ ಸೌಲಭ್ಯಕ್ಕಾಗಿ ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ

    June 15, 2025
    Facebook Twitter Instagram
    ಟ್ರೆಂಡಿಂಗ್
    • ಸೋಲಾರ್ ವಾಟರ್ ಹೀಟರ್ ಖರೀದಿ : ಟೆಂಡರ್ ಆಹ್ವಾನ
    • ಪಾಲಿಕೆ : ಐಇಸಿ ಚಟುವಟಿಕೆಗಾಗಿ ಎಸ್‌ ಹೆಚ್‌ ಜಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
    • ಸಾಲ ಸೌಲಭ್ಯಕ್ಕಾಗಿ ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ
    • ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಅನೈತಿಕ ಚಟುವಟಿಕೆಗಳ ತಾಣವಾದ ಸಾರ್ವಜನಿಕ ಗ್ರಂಥಾಲಯ!
    • ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ: ಸಹಕರಿಸಲು ಅಧಿಕಾರಿಗಳಿಗೆ ಸೂಚನೆ: ಚಂದ್ರಶೇಖರ್ ಗೌಡ
    • ತೋಟಗಾರಿಕಾ ರೈತರಿಗೆ ಸಹಾಯಧನ ಸೌಲಭ್ಯ : ಸದುಪಯೋಗಪಡಿಸಿಕೊಳ್ಳಲು ಮನವಿ
    • ರುಡ್‌ ಸೆಟ್ ಸಂಸ್ಥೆ : ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಮನುವಾದಿಗಳ ಚೆಲ್ಲಾಟ ದಲಿತರ ಕಿತ್ತಾಟ” ಪುಸ್ತಕದ ಕುರಿತು ಅನಿಸಿಕೆ ಅಭಿಪ್ರಾಯ – ರವಿ ತೊಂಡಗೆರೆ
    ಲೇಖನ January 7, 2022

    “ಮನುವಾದಿಗಳ ಚೆಲ್ಲಾಟ ದಲಿತರ ಕಿತ್ತಾಟ” ಪುಸ್ತಕದ ಕುರಿತು ಅನಿಸಿಕೆ ಅಭಿಪ್ರಾಯ – ರವಿ ತೊಂಡಗೆರೆ

    By adminJanuary 7, 2022No Comments6 Mins Read
    manuvadigala chellata

    ತುಮಕೂರು ಜಿಲ್ಲೆಯ ಹಿರಿಯ ಹೋರಾಟಗಾರಾದ ಎಂ. ರಾಮಯ್ಯನವರ “ಮನುವಾದಿಗಳ ಚೆಲ್ಲಾಟ ದಲಿತರ ಕಿತ್ತಾಟ” ಎನ್ನುವ ಬೆಂಕಿ ಬರಹದ ಶೀರ್ಷಿಕೆ ಹೊಂದಿರುವ ಪುಸ್ತಕ.

    ಹಿರಿಯ ಹೋರಾಟಗಾರರು ಹಳಿ ತಪ್ಪಿದ ದಲಿತ ಚಳುವಳಿಗಳನ್ನು ತಹಬಂದಿಗೆ ತಂದು ದಿಕ್ಕುತೋರುವ ಅಂಬೇಡ್ಕರ್ ವಾದಿಗಳು. ಬರಹ ಮತ್ತು ಸಾಮಾಜಿಕ ಚಿಂತನೆಯಲ್ಲಿ ಪ್ರಭುದ್ಧತೆ ಬೆಳೆಸಿಕೊಂಡ ಹಿರಿಯರು ನಮ್ಮದೆ ತುಮಕೂರು ಜಿಲ್ಲೆಯ ಎಲೆಮರೆಯಕಾಯಿ. ಸಾಮಾನ್ಯವಾಗಿ ಬರೆಯುವ ಗೋಜಿಗೆ ಹೋದವರು ಭ್ರಮೆಯನ್ನೋ ಅದ್ಭುತವನ್ನೂ ಅಥವಾ ಯಾವುದೋ ಬಲಿತ ವ್ಯಕ್ತಿಯನ್ನೋ ಗುರಿಯಾಗಿಸಿ ಗೀಚುತ್ತ ವಿಸ್ತರಿಸಿ ಬರೆಯುತ್ತಾ ಹೋಗುವವರ ಸಾಲಿನಲ್ಲಿ ಎಂ ರಾಮಯ್ಯನವರು ವಿಶೇಷವಾಗಿ ಯಾರು ಮುಟ್ಟದ ವಿಷಯವಿಡಿದು  ಶ್ರೇಷ್ಠ ವ್ಯಕ್ತಿಯಾಗಿ ಈ ಪುಸ್ತಕದಲ್ಲಿ ಎದುರುಗೊಳ್ಳುತ್ತಾರೆ.

    ಅದು ಶೋಷಿತರ ಪರ ದುಡಿತ ಮಿಡಿತ ನಿತ್ಯ ಹರಿದ್ವರ್ಣದ ಚಿಂತನೆ. ಅವರು ತಮ್ಮ ಬಗ್ಗೆ ಹೀಗೆ ಹೇಳುತ್ತಾರೆ. “ನನ್ನ ಜೀವನದ ಬದುಕಿನಲ್ಲಿ ಅಲ್ಲಲ್ಲಿ ಬರೆದ ನನ್ನ ಹೆಸರನ್ನು ಪಾಪಿ ಇಲಿಗಳು ಚೂರು ಚೂರು ಮಾಡಿ ಬಿಟ್ಟಿವೆ” ಎನ್ನುವ ವಿಷಾದ ನುಡಿಯ ಹಿಂದೆ ಒಂದು ಆಕ್ರಂದನವಿದೆ.ಅಲ್ಲಿಂದ ಶುರುವಾಗಿ ಅದು ತನ್ನದೆ ಜನಾಂಗ ಶತಮಾನಗಳ ಆಚೆಗೂ ಬೆನ್ನು ಬಾಗಿಸಿ ನೆಲ ಕಚ್ಚಿ ಮೇಲೆಳದ ಸ್ಥಿತಿಯಲ್ಲಿ ಕ್ರೂರವಾಗಿ ಅವಸಾನಗೊಳ್ಳುತ್ತಿರುವುದರ ಕುರಿತು ಅವರಿಗೆ ತುಂಬಾ ಘಾತುಕಬಾದೆ ಇದೆ.ಇದು ಅವರಿಗೆ ಕೇವಲ ನೋವಲ್ಲ. ನಿರಂತರ ಬದುಕಿನ ಅಷ್ಟ ಸುಖಗಳನ್ನು ಕೊಂದ ಶರೀರ ಭಾದೆಯಲ್ಲ. ಹೃದಯ ಬಾದೆ. ಸರಿಕರ ವಧೆ ಬಾದೆ.ಒಗ್ಗಟ್ಟು ನೀರಸನಗೊಂಡು

    ಕಣ್ಣೆದುರಿಗೆ ಮೋಸದಿಂದ ಕೊಲ್ಲುತ್ತಿರುವ ಕಟುಕರ ಮೇಲಿನ ಕೊಪ.ತನ್ನ ಸಮುದಾಯದ ಬೆನ್ನಮೇಲೆ ನಿಂತು ದರ್ಪದಿಂದ ಅಧಿಕಾರ ನಡೆಸುತ್ತಿರುವ ದರ್ಪಿಷ್ಟರ ವಿರುದ್ಧ  ಸಿಡಿದು ಸಿಡಿಯಲಾಗದೆ ಕನಲುವ ಈ ಬಾದೆ, ಅರ್ಥತ್ ಬವಣೆ ನೋವು ಅಸಹಾಯಕತೆ. ದಿಕ್ಕು ತಪ್ಪಿ ದಿಕ್ಕೆಟು ಕನಲಿದ ದಲಿತ ಕೇರಿಗಳ ಬೆಳಗು ಜ್ವಾಲೆಗಳಿಗೆ ಇದರ ಅಲ್ಪ ಸ್ಪರ್ಶವಾದರು ಸೋಕಿ ಅವರ ಆಂತರ್ಯದ ಕೂಗುನೋವು ಇವತ್ತಿನ ಸಮುದಾಯದ ಹೋರಾಟದ ಹುಲಿಗಳಿಗೆ ಕೊಂಚವಾದರು ಬಡಿಯಲ್ಲಿ. ಅದೆ ಆದರ್ಶ ಸಿದ್ದಾಂತಗಳ ಮುನ್ನಡೆಯಲ್ಲೂ ದಿಟ್ಟತನ ಮೆರೆದು ನೋವಿನಲ್ಲೂ ತನ್ನವರ ಪರ ವಹಿಸಿ ನಾವು ಬಡವರಲ್ಲ ವಂಚಿತರು.ನಿರಂತರ ಮೋಸಕ್ಕೆ ಒಳಗಾದ ಆದಿಗರು ಆದಿ ಜಾಂಭವರು ಚಲವಾದಿಗಳು ಎನ್ನುತ್ತಾ ಆದಿ ಪುರುಷರನ್ನು ಬಡಿದ್ದೆಬ್ಬಿಸುವ ಕಾರ್ಯಕ್ಕೆ ಹಗಲಿರುಳು ದುಡಿದ ಜೀವ. ಒಬ್ಬ ಹೋರಾಟಗಾರನಿಗೆ ಸಾಹಿತ್ಯದ ರಸಇತಿಹಾಸ ಎದೆಗೆ ಬಿದ್ದರೆ ತೋಳಿಗೆ ಶಕ್ತಿ ಮತ್ತು ಮೆದುಳಿಗೆ ತಾಳ್ಮೆ ಪ್ರವಹಿಸುತ್ತದೆ.ಅದೆ ಪ್ರವಹಿಸುವಿಗೆಯಿಂದ ವ್ಯಕ್ತಿ ಪ್ರಬುದ್ಧತೆಯ ಮಟ್ಟಕ್ಕೆ ತಲುಪಿ ತಾಳ್ಮೆ ತಂತ್ರ ಪಟ್ಟುಗಳನ್ನು ಕಲಿತು ಹೋರಾಟದ ದೀವಿಟಿಕೆಯನ್ನು ಎತ್ತಿ ಹಿಡಿದು ಸಮಾಜಕ್ಕೆ ಬೆಳಕಾಗಲು ಸಕಾರಣ. ಅಂತಹ ಚಲನಶೀಲತೆಯನ್ನು ಮೈ ಗೂಡಿಸಿಕೊಂಡು ತನ್ನ ಪರಿವಾರದವರು ಅದೇ ಹಾದಿಯಲ್ಲಿ ನಡೆಯಲ್ಲೂ ಇಲ್ಲಿ ಪ್ರೇರೇಪಿಸುತ್ತಾ…… ಜೊತೆಜೊತೆಗೆ ನೋಯ್ಯುತ್ತಾ ತನ್ನ ಪುಸ್ತಕದ ಪ್ರಯಾಣದುದ್ದಕ್ಕೂ ಜನಾಂಗದ ಮೇಲಿನ ಆ ಪ್ರೀತಿಗೆ ನಿಜಕ್ಕೂ ನನ್ನದೊಂದು “ಭೀಮ್ ಸಲಾಂ”

    ಬಹುಶಃ ನಮ್ಮ ಕಾಲಘಟ್ಟದಲ್ಲಿ ಇಂತಹ ಆಶಾದಾಯಕ ನಲ್ಮೆಯ ಒಡನಾಟ ಪರಿಶಿಷ್ಟರ ಅಸ್ಮಿತೆಯ ಬಗ್ಗೆ ಒಬ್ಬ ಹೋರಾಟಗಾರನ ಎದೆಯಲ್ಲಿ ಈ ಮಟ್ಟದ ಬಡಿದಾಟ ಹೋರಾಟ ಚೀರಾಟ ಕಂಡಿದ್ದು ನನಗಂತ್ತು ಸೋಜಿಗ.

    ಏಕೆಂದರೆ “ತಮಟೆ ಒಂದು ಅಸ್ತ್ರ ಅದು ಬಂದೂಕಿನ ನಳಿಕೆಗಿಂತ್ತಲು ಹೆಚ್ಚು ಪ್ರಭಾಶಾಲಿ” ಎನ್ನುವ ಅವರ “ಬರಹ ಖಡ್ಗಕಿಂತ ಹರಿತವಾದದ್ದು” ಎನ್ನುವ ಹಾಗೆ.ದಂಡೋರ ಎನ್ನುವ ಪದದ ಅರ್ಥವನ್ನು ಸಂಗೀತ ಆ ಸಂಗೀತವೇ ಪ್ರಚಾರ ಅದರ ಶ್ರಮಿಕರು ನಾವೆ ಮಾಧ್ಯಮ ಆ ಮೊದಲ ಆದಿಮರು ಮಾದಿಗರು ಮಾಧ್ಯಮದವರು ಊರು ಕೇರಿಗಳಲ್ಲಿ ಸಂಗೀತವಾಗಿ

    ದಂಡೋರ ಎನ್ನುತ್ತಾ ವಿಜೃಂಭಿಸಿದ್ದಾರೆ.ಯಾವುದು ಕೀಳು ಎಂದು ಜನ ಭಾವಿಸುತ್ತಾರೆಯೋ ಅದು ಶ್ರೇಷ್ಠ ಎನ್ನುವ ಸತ್ಯವನ್ನು ಜನ ಮರೆತಿದ್ದಾರೆ ಎನ್ನುತ್ತಾ ನಗಾರಿ ಮೇಲಿನ ಸಿಡಿಗಡ್ಡಿಯಂತ್ತೆ ಸಿಡಿಯುತ್ತ ಬರೆಯುತ್ತಾ ಸುದೀರ್ಘವಾದ ವಾದದೊಂದಿಗೆ ನುಗ್ಗುತ್ತಾರೆ. ರಾಮಯ್ಯನವರ ಕೃತಿಯನ್ನು ಪ್ರತಿಯೊಬ್ಬ ದಲಿತ ಪರ ಕಾಳಜಿ ಇಟ್ಟುಕೊಂಡಿರುವ ಹೋರಾಟಗಾರರು ಮುಖಂಡರು ಮತ್ತು ಗಲ್ಲಿ ಕುತ್ತಾಗಳಂತ್ತೆ ಬೊಗಳುವ ಮನುವ್ಯಾದಿ ಪ್ರೇರಣೆಗೆ ನಲುಗಿ ನಶೆಯ ಶೀಶೆಯಲಿ ತೇಲಾಡುವ ಸೊಗಳಾಡಿ ಪುಡಾರಿಗಳು ಈ ಕೃತಿಯನ್ನು ಒಮ್ಮೆ ಓದಿಕೊಳ್ಳಬೇಕು.ಎದೆಗೆ ಅಪ್ಪಿಕೊಳ್ಳಬೇಕು.ಸದಾ ಮಡಿ ಮೈಲಿಗೆ ದೀಪ ಧೂಪ ಹಬ್ಬ ಗಬ್ಬಗಳಿಗೆ ಮೀಸಲಾಗಿರುವ ಮೂಢತೆಯನ್ನು ಮೆಟ್ಟಿಕೊಂಡಿರುವ  ಬೆಪ್ಪು ದಲಿತ ಸ್ತ್ರೀಯರು ಕೂಡ ವಿಶೇಷವಾಗಿ ಓದಿಕೊಳ್ಳಬೇಕು.ಕಾರಣ ಶತಮಾನಗಳಿಂದ ಶೋಷಿತರಾಗಿರುವ ಗುಡಿ ಗುಂಡಾರದ ಸ್ತ್ರೀಯರಿಗೆ ಈ ನೆಲದಲ್ಲಿ ಸ್ತನ ತೆರಿಗೆ ಹೇರಿ,ಮೇಲ್ವಸ್ತ್ರ ಧರಿಸಲು ವಿರೋಧಿಸಿದ ವೈದಿಕ ಪರಂಪರೆಯನ್ನು ಮನೆಯಲ್ಲಿ ಮನಗಳಿಗೆ ಮಕ್ಕಳಿಗೆ ಬೋದಿಸಿ ದಾರಿ ತಪ್ಪಿಸುತ್ತಿರುವ ಶೀಲಾಮಣಿಗಳು ಎಚ್ಚರ ವಹಿಸಬೇಕು. ಮಹಿಳೆಯರ ಒಳ ಗುಟ್ಟನ್ನು ರಾಜಾರೋಷವಾಗುವಿಕೆಗೆ ಮೊದಲ ಹೆಜ್ಜೆ ಇಟ್ಟ ಪುಣ್ಯಾತ್ಮರು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು.ಅದಕ್ಕಾಗಿ ಹಿಂದೂ ನೀತಿ ಸಂಹಿತೆ ರಚಿಸಿ ಅವರಿಗೆ ಶಿಕ್ಷಣ ಅಧಿಕಾರ ಆಸ್ತಿ ಪಾಲು ಹೀಗೆ ಸಾಮಾಜಿಕ ಸ್ಥಾನಮಾನಗಳ ಹಕ್ಕುಗಳ ಪ್ರತಿಪಾದಿಸಿ ಕೊಡಲು ಅಧಿಕಾರ ತ್ಯಾಗ ಮಾಡಿದ ಆಧುನಿಕ ಮಹಾತ್ಮ ಮಹಾನಾಯಕ.ಇವರ ಬಗ್ಗೆ ಇವತ್ತಿನ ಸ್ತ್ರೀಯರು ಎದೆಗೆ ಅಂಬೇಡ್ಕರ್ ಹೆಸರನ್ನು ಸ್ಮರಣೆಯನ್ನು ಧಾರಾಕಾರವಾಗಿ ಎದೆ ಸಾರೆ ಧಾರೆ ಎರೆದು ಕೊಳ್ಳಬೇಕು.ಆದರೆ ಯಾಕೊ ಅವರ ಫಲವನ್ನು ಅನುಭವಿಸಿದ ಎಷ್ಟೋ ಜನ ಕಕ್ಕುಲಾತಿ ಮಹಿಳೆಯರು ಅವರ ಹೆಸರನ್ನು ಜಾತಿಯ ಆಧಾರದ ಮೇಲೆ ಅಸಹ್ಯ ಪಡುವ ಕಿತನಿಜಾತಿಯ ಹೆಂಗಸರಂತ್ತೆ ಹೇಸಿಗೆ ಹುಟ್ಟಲು ಕಾರಣರಾಗುತ್ತಾರೆ.ಆದರೆ ದಲಿತ ಮಹಿಳೆಯರಾದರು ಅವರನ್ನು ಎತ್ತೆಚ್ಚವಾಗಿ ಸ್ಮರಿಸಲು ಇಲ್ಲಿ ಆಶಾಭಾವನೆಯೊಂದು ಬೇಡಿಕೊಳ್ಳುತ್ತಿದೆ.ಅದು ಕೂಡ ಸಾಧ್ಯವಾಗದ ಲಕ್ಷಣ ಕಂಡಾಗ ಮರುಗುವ ಲೇಖಕ ರಾಮಯ್ಯ ನವರು ಪ್ರತಿ ಬಾರಿ ಕೊರಗುತ್ತ ಮತ್ತೆ ಪುಟಿದೇಳುತ್ತ ಅಂಕಿ ಅಂಶಗಳನ್ನು ಕೊಟ್ಟು ಸಂವಿಧಾನದ ಆಶಯಗಳನ್ನು ಜನರ ಎದೆಗೆ ತಳ್ಳುತ್ತಲೇ ಪುಟವನ್ನು ಮುಗಿಸುತ್ತ ಮುನ್ನಡೆಯುತ್ತಾರೆ.ಅಲ್ಲಿ ಗತಕಾಲದ ಚೆರಿತ್ರೆಯನ್ನು ನೆನಪಿಸಿ ಮನುವ್ಯಾದಿಗಳ ಅಟ್ಟಹಾಸ ಇವತ್ತಿನ ದಲಿತರ ದುಸ್ಸಾಹಸವನ್ನು ತಳುಕಿಸಿ ಬೆಂಕಿ ತಲೆ ಬರಹ ಕೊಟ್ಟು ಕೈಗಿಟ್ಟ ಪುಸ್ತಕ. ಪ್ರಾಥಮಿಕವಾಗಿ ದೇಶದ ಸಮಾಜದ ಎಲ್ಲಸ್ತರದ ವಿಷಯಗಳನ್ನು ಪ್ರಸಾದದಂತ್ತೆ ಹಂಚಿದ್ದಾರೆ.ಅದನ್ನು ಸವಿಯಲು ಜ್ಞಾನದ ದಾಹ ಇದ್ದವರಿಗೆ ಈ ಪುಸ್ತಕ ತನ್ನ ಮಸ್ತಕವನ್ನು ತಿದ್ದುವುದರಲ್ಲಿ ಸಂದೇಹವಿಲ್ಲ.

    ಎಡಗೈ ಬಲಗೈ ಪಾಳಯದಲ್ಲಿ ಅಧಿಕಾರ ಗದ್ದುಗೆ ಏರಿದ ಮಹಾನುಭಾವರ ಬಗ್ಗೆ ಕೊಂಚ ಕೋಪವಿಟ್ಟು ಕೊಂಡಂತ್ತೆ  ಗುಡುಗುತ್ತಾ ಅಲ್ಲಲ್ಲಿ ಎರಡು ಗುಂಪಿಗೂ “ಭಾತೃತ್ವವೇದಿಕೆಮಿಲನ” ಬಯಸಿದ್ದಾರೆ.ಇಬ್ಬರಲು ಸಮಾನ ಮನಸ್ಥಿತಿಯನ್ನು ಎದುರು ನೋಡುತ್ತಿದ್ದಾರೆ.ಎರಡು ಸಮುದಾಯದ

    ಅಧಿಕಾರಿಗಳಿಗೆ ವೃತ್ತಿ ಧರ್ಮವಾಗಬೇಕೆ ವರೆತು ಬುತ್ತಿದರ್ಮ ವಾಗುತ್ತಿರುವುದರ ಕುರಿತು ಕೆಂಡವಾಗಿದ್ದಾರೆ. ಸಮಾಜಕ್ಕಾಗಿ ದುಡಿದ ಪುಣ್ಯಾತ್ಮರನ್ನು ಸ್ಮರಿಸುವುದಾ ಮರೆತಿಲ್ಲ ಅಂತ್ಯಜರ ಉದ್ದಾರಕ್ಕೆ ಅವತರಿಸಿದ ಪ್ರಾಮಾಣಿಕರ ಬಗ್ಗೆ ಗೌರವ ತೋರಿ ಬುದ್ಧ ಬಸವ ಅಂಬೇಡ್ಕರ್ ಅವರನ್ನು ಎತ್ತೆಚ್ಚವಾಗಿ ಎದೆಗೆ ಇಳಿಸಿಕೊಂಡು ಗಾಂಧಿಯ ಬಗ್ಗೆ ಲಘು ಕೋಪ.ಆದರೆ ಅಲ್ಲಿ ಪೂನ ಒಪ್ಪಂದವನ್ನು ಹೆಸರಿಸಿ ಗಾಂದಿಯಿಂದ ಪ್ರಭಾವಿತವಾದ ಹಿಂದೂ ಸಮಾಜ ಒಟ್ಟಾರೆಯಾಗಿ  ಅಷ್ಪೃಶ್ಯರು ಸ್ಥಾನಮಾನ ಗಳಿಸುವುದನ್ನು ವ್ಯವಸ್ಥಿತವಾಗಿ ಮಟ್ಟಹಾಕಿದ್ದು,ಸ್ವರಾಜ್ಯ ಸಿಗದಿದ್ದರೂ ಪರವಾಗಿಲ್ಲ ಆದರೆ ಈ ಅಷ್ಪೃಶ್ಯರು ರಾಜಕೀಯವಾಗಿ ಯಾವುದೇ ಮೇಲ್ಸ್ತರಕ್ಕೆ ಹೋಗದ ಹಾಗೆ ವ್ಯವಸ್ಥಿತ ಸಂಚು ನಡೆದಿದ್ದನ್ನು ಬಹು ಧೈರ್ಯವಾಗಿ ಅಕ್ಷರಗಲ್ಲಿ ಕುಟುಕಿದ್ದಾರೆ. ಗಾಂಧಿ ಬಗ್ಗೆ ಕೋಪಗೊಳ್ಳಲು ಒಂದು ಸಂಗತಿಯ ವಿವರಣೆ.

    ತನ್ನ ಮನೆಗೆ ಕಕ್ಕಾಸು ತೊಳೆಯಲು ಬರುತ್ತಿದ್ದ “ಉಕಾ”  ಎಂಬುವನನ್ನು ಅಕಸ್ಮಾತ್ ಮುಟ್ಟಿದರು.ಮೈಲಿಗೆಯು ತಾಳಿ ಅಷ್ಪೃಶ್ಯನನ್ನು ಮುಟ್ಟಿದ ತಪ್ಪಿಗೆ ದಾರಿಯಲ್ಲಿ ನಡೆದು ಹೋಗುತ್ತಿದ್ದ ಮುಸ್ಲಿಮನನ್ನು ಬೇಕಂತಲೇ ಮುಟ್ಟಿ “ಬಿಡಿತು ಅಥವಾ ಬಿಡ್ತು” ಎನ್ನುವುದರಿಂದ ಶುದ್ದಿಯಾದೆ ಎನ್ನುವ ತಾತ್ಕಾಲಿಕ ಶುದ್ದಿಯಾದ್ದುದ್ದರ ಮಾನಸಿಕ ತಾಳು ಭಾವನೆಯು ತಾಯಿಂದ ಬಂದದ್ದು ಎನ್ನುವುದು ಎಂತ ಅವಿವೇಕಿತನ.ಇದು ರಾಷ್ಟ್ರಪಿತ ಎಂದು ಉದ್ದುದ್ದ ಕೂಗುವ ಗಾಂಧಿ ಮನೆಯಲ್ಲಿ ಇಂತ ಕ್ರೂರ ಮನಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಾರೆ.ಗಾಂಧಿ ಇದನ್ನು ಧಾರ್ಮಿಕ ವೈಫಲ್ಯಕ್ಕೆ ಹೋಲಿಸಿ ಈ ಮನಸ್ಥಿತಿಯನ್ನು ತಿರಸ್ಕರಿಸಿದರು ಎನ್ನುವ ಭಾವನೆಯಿಂದ ರಾಮಯ್ಯನವರು ತಣ್ಣಗಾಗುತ್ತಾರೆ.

    ಮೀಸಲಾತಿಯ ಹರಸಿಕೊಂಡು ಬಂದ ದಲಿತ ಮಂತ್ರಿ ಮಹೋದಯರುಗಳು ಜಾತಿ ವಿಚಾರಗಳಲ್ಲಿ ಅತ್ಯಾಚಾರ ಕೊಲೆ ನಿಂದನೆಗಳಾದಗ ಸೊಲ್ಲುಎತ್ತದೆ ತೆಪ್ಪಗಿದ್ದು ಜಾಣ ಕುರುಡು ಜಾಣ ಕಿವುಡರಾಗುವವರ ಕುರಿತು ಉರಿಯುತ್ತಾರೆ.

    ಇದು ಇಂದಿನ ರಾಜಕಾರಣಿಗಳ ಪುಕ್ಕಲುತನವನ್ನನ್ನು ವಿಡಂಬನಾತ್ಮಕವಾಗಿ ಅಣಕಿಸುತ್ತದೆ.ಅವರ ಒತ್ತಾಸೆ ಇತರೆ ಸಮುದಾಯಗಳಂತೆ ರಾಜಕಾರಿಣಿಗಳೂ ಸಮುದಾಯದ ಏಳಿಗೆಗೆ ಶ್ರಮಿಸುವ ಆಶಾ ಭಾವನೆ ತೋಡಿಕೊಳ್ಳುತ್ತಾ ಬದುಕಲು ಭರವಸೆ ಎದುರುಗಾಣುತ್ತಾರೆ.

    ಇದರ ಜೊತೆಗೆ ಜಿಗಿದು ಒಂದು ಅಣಕದಂತ್ತೆ ಪ್ರಶ್ನಿಸುತ್ತಾ ಪೇಜಾವರರಿಗೆ ನೀಡುಮಾಮಿಡಿಯವರ ಪ್ರಶ್ನೆಗಳು ಬಲು ಪ್ರಸ್ತುತವಾಗಿ ಅಣಕಿಸುತ್ತವೆ. ಪ್ರತಿ ಆಪತ್ತಿನ ಕಾಲಘಟ್ಟದಲ್ಲೂ ದಲಿತರು ರಾಜಕೀಯವನ್ನು ಧರ್ಮವನ್ನು ಶ್ರೇಷ್ಠರು ಎನ್ನಿಸಿಕೊಂಡವರನ್ನು ಕಾಪಡಿದ್ದು ಅದಕ್ಕಾಗಿಯೇ ಪಳಗಿಸಿ ಇಟ್ಟುಕೊಂಡಿರುವ ಧರ್ಮವನ್ನು ಅದರ ನ್ಯೂನ್ಯತೆಯನ್ನು ಮನು ಸ್ಮೃತಿ ಯನ್ನು ಉಲ್ಲೇಖಿಸಿ ತಲೆಯಲ್ಲಿ ಸಗಣಿ ತುಂಬಿಕೊಂಡ ಸಮಾಜ ಘಾತುಕರಿಗೆ ಮಂಡೆ ಬಿಸಿ ಮಾಡಿದ್ದಾರೆ.ಅವರ ಒಟ್ಟಾರೆ ಆಕ್ರೋಶ ಪ್ರಾಚೀನ ಭಾರತದ ಸೌಂದರ್ಯ ಈ ಆದಿಜಾಂಭವ ಮಾತಂಗ ಪರಂಪರೆಯುಳ್ಳ ಶ್ರೇಷ್ಟ ದೇಶವಾಸಿಗಳನ್ನು ಹೀನಾಯವಾಗಿ ನಡೆಸಿಕೊಂಡ ಬ್ರಾಹ್ಮಣ್ಯದ ವಿರುದ್ದ ಪುಟಿದೇಳುತ್ತಾರೆ.ಈ ಇಳಿವಯಸ್ಸಲ್ಲು ಜೀವಂತವಾಗಿರುವ ಅವರ ಸಿದ್ಧಾಂತಗಳು ತನ್ನ ಪ್ರಖರತೆಯನ್ನು ತಗ್ಗಿಸಿಕೊಂಡಿಲ್ಲ.

    ಹಾಗಾಗಿ ಎಪ್ಪತ್ತು ಎಂಬತ್ತರ ದಶಕದಲ್ಲಿ ದಲಿತ ಚಳುವಳಿಗಳು ಪ್ರವರ್ಧಮಾನಕ್ಕೆ ಏರತೊಡಗಿದ ಕಾಲ.ಆ ಕಾಲ ಘಟ್ಟದಲ್ಲಿ ದುಡಿದ ನಿಷ್ಠಾವಂತ ರಾಜಕಾರಣಿಗಳನ್ನು ದಯನೀಯವಾಗಿ ನೆನೆಯುತ್ತಾರೆ. ಯುವಕರನ್ನು ಚಾಚು ತಪ್ಪದೆ ಅವರ ಹೆಸರುಗಳನ್ನು ಉಲ್ಲೇಖಿಸಿ ಇವತ್ತಿನ ನವ ಯುವಕರಿಗೆ ಸ್ವತಃ ರಾಮಯ್ಯನವರೆ ಕೈಪಿಡಿ.ಜೀವನ ಹೋರಾಟದ ಪರ್ಯಟನೆಯಲ್ಲಿ ಸಾಧಿಸಿದ್ದು ಹಲವುಗಳಿದ್ದರೆ ಅವುಗಳನ್ನು ಗುರುತು ಸಿಗದಹಾಗೆ ತುಂಡರಿಸಿದ ಇಲಿಗಳು ತನ್ನ ಜೊತೆಗಿದ್ದವರೆ ಎನ್ನುವ ವಿಷಾದ ಭಾವದಿಂದ ನುಡಿದು ಸೊರಗುತ್ತಾರೆ. ಆದರೂ ಅವರಲ್ಲಿನ ಆ ಪ್ರಾಮಾಣಿಕ  ಹೋರಾಟದ ಹಣತೆ ಈಗಲೂ ಪ್ರಜ್ವಲವಾಗಿ ಉರಿಯುತ್ತಿರುವುದನ್ನು  ಸ್ವಜಾತಿಯ ಜನ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಗುರುತಿಸದೆ ತಪ್ಪು ಮಾಡಿದೆ.ಒಬ್ಬ ಹೋರಾಟಗಾರನಿಂದ ಇಡೀ ವ್ಯವಸ್ಥೆ ಎಚ್ವೇತ್ತು ಸಮಾಜ ಸುಸ್ಥಿತಿಗೆ ತಿರುಗಿ ಕೊಳ್ಳುತ್ತದೆ.ಆದರೆ ಅದರ ಹಿಂದಿನ ಶ್ರಮವನ್ನು ಮರೆಸಿ ತಮ್ಮವರೆ ತಮ್ಮ ವಿನಾಶದ ಸಾಹಸಕ್ಕೆ ಅವಿರತವಾಗಿ ದುಡಿದು ಇತಿಹಾಸವನ್ನು ವಿರೂಪ ಗೊಳಿಸುವ ಮನುವಾದ  ಮನಸ್ಥಿತಿ ತೋಲಗಲಿ. ಅಂಬೇಡ್ಕರ್ ಬುದ್ಧ ಬಸವ ಚಿಂತನೆಗಳು ಸರಾಗವಾಗಿ ಚಿರಾಯುವಾಗಲಿ ಎನ್ನುವುದು ಹಿರಿಯ ಹೋರಾಟಗಾರ ಲೇಖಕ ಮಾತೃ ನೆಲದ ಸೊಗಡು ಎಂ ರಾಮಯ್ಯನವರ ಜೀವಿತಾವದಿಯ ಹೆಬ್ಬಯಕೆ.

    ಈ ಪುಸ್ತಕದಲ್ಲಿ ಅನಿಸಿಕೆ ಅಭಿಪ್ರಾಯಗಳ ಬರವಣಿಗೆ ಮುನ್ನುಡಿ ಬರೆದವರ ಬರಹ ಅಚ್ಚುಕಟ್ಟಾಗಿ ಸರವಾಗಿ ಮನ ಮುಟ್ಟುತ್ತವೆ. ನಾಡಿನ ಚಿಂತಕ ಹೋರಾಟಗಾರರು ಆದ ಡಾ,ವಡ್ಡಗೆರೆ ನಾಗರಾಜಯ್ಯ ಅವರ ಗೋಸಂಗಿ ವಿಶಿಷ್ಟವಾದ ಇತಿಹಾಸವನ್ನು ಹೇಳತೊಗುತ್ತದೆ.ಇವತ್ತಿನ ಯುವಕರಿಗೆ ಇದು ತಮ್ಮ ಸಮುದಾಯದ ಶ್ರೇಷ್ಠತೆಯನ್ನು ಪರಿಚಯಿಸುತ್ತದೆ.ನನ್ನ ಅನಿಸಿಕೆ ಅಭಿಪ್ರಾಯ ಹೇಳುವ ಹಾಗೆ,

    ಈ ಪುಸ್ತಕದಲ್ಲಿನ ಒಟ್ಟಾರೆ ಉದ್ದೇಶ ದಲಿತ ಜನಾಂಗ ಮತಮೌಢ್ಯ ದಾರಿದ್ರ್ಯದ ಮನಸ್ಥಿತಿಯಿಂದ ತಮ್ಮಿಂದ ತಾವು ಹೊರ ನುಸುಳಿವುದು.ಮತ್ತು ಅಂಬೇಡ್ಕರ್ ಏನು ಹೇಳಿದ್ದಾರೆ ಎನ್ನುವುದನ್ನು ಮತ್ತೆ ಮತ್ತೆ ಮತ್ತೆ ಮನನ ಮಾಡಿಕೊಂಡು ನವಭಾರತದಲ್ಲಿ ಅಷ್ಪೃಶ್ಯರು ಎಲ್ಲ ಕೀಳರಿಮೆ ದಾಟಿ ಮೇಲು ಸ್ತರದಲ್ಲಿ ನಿಂತು ರಾಜ ಠೀವಿ ಯಿಂದ ಸುಶಿಕ್ತರಾಗಿ ಶಿಕ್ಷಣ ಅರಿವು ವಿವೇಚನೆ ತಾಳ್ಮೆ ವಹಿಸಿ”ಶಿಕ್ಷಣ ಹುಲಿಯ ಹಾಲಿದ್ದಂತ್ತೆ ಅದನ್ನು ಕುಡಿದವನು ಘರ್ಜಿಸಲೇ ಬೇಕು.ಎನ್ನುವಂತೆ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎನ್ನುವ ಆಶಯ ತತ್ವದಡಿ ದಲಿತ ಸಮಾಜ ಬದಲಾಗಲಿ ಎನ್ನುವ ಲೇಖಕರ ಹೃದಯ ಪ್ರೇಮ ನಂಬಿಕೆ ಮುಂದೊಂದು ದಿನ ನಿಜವಾಗಲಿ.ದೇಸಿ ರಂಗಗಳಾದ ರಾಜಕಾರಣ ಸಾಹಿತ್ಯ ಮತ್ತು ಆರ್ಥಿಕ ಪ್ರಾಬಲ್ಯ ಹೊಂದಿ ಕೀರ್ತಿ ಮುಕುಟಕ್ಕೇರುವವರನ್ನು ಅಸೂಯೆಯಿಂದ ನೋಡುವ ಪರಿವಾರದವರ ಬಗ್ಗೆ ತುಂಬಾ ಚಟಪಟಿಸುತ್ತಾರೆ.ಹಾಗೂ ಇದಕ್ಕೆ ಕಾರಣವಾದ ಮನುವಾದಿಗಳ ಸಂಗ ಮತ್ತು ಹಿಡಿತಕ್ಕೆ ಸಿಕ್ಕು ನರಳುತ್ತಿರುವ ದಲಿತ ಸಮುದಾಯದ ಬಗ್ಗೆ ಎಚ್ಚರಿಸುತ್ತಾ ಅನುಕಂಪದಿಂದ ತಬ್ಬಿಕೊಳ್ಳುವ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಹಾಗೂ ಮನುವಾದಿಗಳ ಚೆಲ್ಲಾಟಕ್ಕೆ ಬಲಿಯಾಗಿ ಜನಾಂಗದ ವಿರುದ್ಧ ಕತ್ತಿ ಮಸೆಯುವವರ ವಿರುದ್ಧತನ್ನ ವಿರೋಧ ಅಭಿವ್ಯಕ್ತಿಸುತ್ತಾರೆ. ಆಸಕ್ತಿ ಮತ್ತು ಪ್ರತಿಭಾ ಅನಾವರಣವನ್ನು ಸಹಿಸದೆ ಕುಪಿದು ನೆಲ ಮಟ್ಟ ತುಳಿಯಲು ಬಲಪ್ರಯೋಗಿಸುವ ಒಳ ಸಮುದಾಯಗಳಲ್ಲಿ ಮಾನ್ಯ ಎಂ ರಾಮಯ್ಯನವರ ಒಡನಾಟ ಪ್ರತಿಯೊಬ್ಬ ಯುವ ಸಮುದಾಯಕ್ಕೆ ಸ್ಪೂರ್ತಿ. ಹಾಗಾಗಿ ಈ ಶೀರ್ಷಿಕೆ “ಮನುವಾದಿಗಳ ಚೆಲ್ಲಾಟ ದಲಿತರ ಕಿತ್ತಾಟ”. ಪ್ರಸ್ತುತವೂ ಈ ಪುಸ್ತಕ ಸೂಕ್ತವೆನಿಸುತ್ತದೆ.ಅವರ ಕನಸಿನ ಭಾರತದ ಹೋರಾಟಗಳು ಮತ್ತೆ ಮತ್ತೆ ಜನ್ಮತಾಳಲಿ ತಮ್ಮ ಅಖಂಡ ದೇಶಪ್ರೇಮ ಸಮುದಾಯ ಪ್ರೇಮ ಸಂವಿಧಾನದ ಆಶಯಗಳು ಸಾಕಾರಗೊಳ್ಳಲಿ ಎಂದು ಆಶಿಸುತ್ತ ಕೈಗೆ ಪುಸ್ತಕ ಕೊಟ್ಟು ನನ್ನ ಮಸ್ತಕಕ್ಕೆ ಜ್ಞಾನದ ಬತ್ತಿ ಬೆಳಗಿಸಿದ ಎಂ ರಾಮಯ್ಯ ನಿಮಗೆ ಈ ಕಿರಿಯ ಓದುಗನ ಶರಣು ಶರಣಾರ್ಥಿ ಜೈ ಭೀಮ್.

    ravi thondagiri

    ರವಿ ತೊಂಡಗೆರೆ

    admin
    • Website

    Related Posts

    ನಿಜವಾದ ದಾನಿ

    April 4, 2025

    ರಾಜನ ಹಿಂದಿನ ಜನುಮ

    April 2, 2025

    ಏಪ್ರಿಲ್ 1: ಪ್ರತಿ ನಿತ್ಯವೂ ನಾವು ಫೂಲ್ ಗಳಾಗುತ್ತೇವೆ

    April 1, 2025
    Our Picks

    ಪತನಗೊಂಡ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು: ಅಮಿತ್ ಶಾ

    June 13, 2025

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025

    ಸಿಕ್ಕಿಂ ಭೂಕುಸಿತ ಪ್ರಕರಣ: ನಾಪತ್ತೆಯಾಗಿದ್ದ ಐದು ಸೇನಾ ಸಿಬ್ಬಂದಿಯ ಪೈಕಿ ಒಬ್ಬರ ಮೃತದೇಹ ಪತ್ತೆ

    June 9, 2025

    ಚುನಾವಣಾ ಆಯೋಗಕ್ಕೆ ಪ್ರಶ್ನೆ ಕೇಳಿದ್ರೆ ಬಿಜೆಪಿ ಪ್ರತಿಕ್ರಿಯಿಸುತ್ತಿದೆ: ಸಂಜಯ್ ರಾವತ್ ಕಿಡಿ

    June 9, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸೋಲಾರ್ ವಾಟರ್ ಹೀಟರ್ ಖರೀದಿ : ಟೆಂಡರ್ ಆಹ್ವಾನ

    June 15, 2025

    ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಸೋಲಾರ್ ವಾಟರ್ ಹೀಟರ್ ಖರೀದಿಸಲು GeM(Government…

    ಪಾಲಿಕೆ : ಐಇಸಿ ಚಟುವಟಿಕೆಗಾಗಿ ಎಸ್‌ ಹೆಚ್‌ ಜಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

    June 15, 2025

    ಸಾಲ ಸೌಲಭ್ಯಕ್ಕಾಗಿ ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ

    June 15, 2025

    ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.