ವರದಿ: ದೊಡ್ಡೇರಿ ಮಹಾಲಿಂಗಯ್ಯ
ಮಧುಗಿರಿ: ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ಅವರು ಶಾಂತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಭಾವಪೂರ್ವಕ ಶ್ರದ್ದಾoಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಮಧುಗಿರಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಶನಿವಾರ ನಡೆಯಿತು.
ಇ.ಓ.ದೊಡ್ಡ ಸಿದ್ದಯ್ಯ, ಕೃಷಿಇಲಾಖೆ ಎ.ಡಿ.ಹನುಮಂತರಾಯಪ್ಪ, ಸಿದ್ದಪುರ ರಂಗಶಾಮಣ್ಣ, HMT ನರಸಿಪ್ಪ, ದೊಡ್ಡೇರಿ ಮಹಾಲಿಂಗಪ್ಪ, ಅಶೋಕ , ನಾಗೇಶ್ , ಶಿವಕುಮಾರ್, ಮಂಜುನಾಥ ಐಡಿಹಳ್ಳಿ, ರವಿ, ಯುವರಾಜು, ಬೇಡತ್ತೂರು ತಿಪ್ಪೇ ಸ್ವಾಮಿ, ಪಾಂಡುರಂಗಯ್ಯ, ದೊಡ್ಡಹೊಸಹಳ್ಳಿಮೂರ್ತಿ, ಸಂಜೀವಮೂರ್ತಿ, ಜೀವಿಕಮಂಜು ಹನುಮಂತರಾಯಪ್ಪ,ಸಿದ್ದಾಪುರಸಂಜೀವಯ್ಯ ನಾಗೇನಹಳ್ಳಿಸುನಿಲ್, ಹಾಗೂ ಸಮಸ್ತ ಮಾದಿಗ ಸಮುದಾಯ ಹಾಗೂ ಮಾದಿಗ ದಂಡೊರ ಸಂಘಟನೆ ಮಧುಗಿರಿ ಕಾರ್ಯಕ್ರಮದಲ್ಲಿ ಭಾಗಿಯಾಯಿತು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ ಶ್ರೀಶ್ರೀಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ರವರು ಲಿಂಕೈಕ್ಯರಾಗಿದ್ದು, ಪರಮಪೂಜ್ಯರು ಮಾದಿಗ ಸಮುದಾಯದ ಎಲ್ಗೆಗಾಗಿ, ಬಡವರ ಧ್ವನಿಯಾಗಿ, ನೊಂದವರಿಗೆ ನೆರಳಾಗಿ, ಹೋರಾಟದ ಶಕ್ತಿಯಾಗಿ “ಬದುಕಿನೂದ್ದಕ್ಕೂ ನಿರಂತರ ಮಾದಿಗ ಸಮುದಾಯದ ಪರ ಜಾಗೃತಿ ಮೂಡಿಸುತ್ತ, ಮಾದಿಗ ಆದಿಜಾಂಬವ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ.
ಮಠದ ಹಿನ್ನಲೆ:
ಪ್ರಾಚೀನ ಕಾಲದ ಮಠ ಪರಂಪರೆಯಿಂದ ಕೂಡಿದ ಶ್ರೀ ಮಠದ ಸಂರಕ್ಷಿತ ದಾಖಲೆಗಳ ಪ್ರಕಾರ ಕೊಡಿಹಳ್ಳಿ ಅದಿಜಾಂಬವ ಮಠವು “ಆಂಧ್ರಪ್ರದೇಶ ಕಡಪ ಮೂಲದ ಶ್ರೀ ಚಂದಾಯಮುನಿ ಅವರಿಂದ ಶ್ರೀ ಮನೃಪ ಶಾಲಿವಾಹನ ಶಕೆ1061ರಲ್ಲಿ ಕ್ರಿ.ಶ 1139 ನೇ ಕಡಪ “ಆದಿಜಾಂಬವ ಮಾತಂಗ ರಾಜಸಿಂಹಾನ ಮಠದ ಅಧೀನದಲ್ಲಿ “ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಆದಿಜಾಂಬವ ಮಾತಂಗ ಮಹಾಸಂಸ್ಥಾನವು ಇದೆ ಎಂದು ಉಲ್ಲೇಖಿಸಲಾಗಿದೆ.
ಆಂಧ್ರಪ್ರದೇಶದ ಕಡಪ ಮಠದ ಶಾಖಾ ಮಠವಾಗಿದ್ದ, ಕೋಡಿಹಳ್ಳಿಯ ಆದಿಜಾಂಬವ ಮಠಕ್ಕೆ ಕ್ರಿ.ಶ.1893ರಲ್ಲಿ ಮೈಸೂರು ದಿವಾನರು ಕಂಚಿನ ಬಿಲ್ಲೆ ಜವಾನರ ಸೇವೆ ಒದಗಿಸಿದ್ದು, ಆಗಿನ ಕಾಲದ ಆದಿಜಾಂಬವ ಮಠದ ಗುರುಗಳಿಗೆ ಬೇರಾವುದೇ ಜಾತಿಯ ಮಠಾಧೀಶರಿಗೆ ನೀಡದ ಗೌರವ ನೀಡಿ, ಜೊತೆಗೆ ಹಕ್ಕು ಸೌಲಭ್ಯಗಳನ್ನು ಒದಗಿಸಿರುವುದು ತಿಳಿದುಬರುತ್ತದೆ.
ಇಂತಹ ಆದಿಮ ಪರಂಪರೆಯಲ್ಲಿ ಶ್ರೀ ಶೈಲಮಠ, ಪೆನಗೊಂಡ ಮಠ, ಕಡಪ ಮಠ,ಬೆಜವಾಡ ಮಠ, ಕೊಂಕಲ್ ಮಠ, ನೆಲಮಂಗಲ ಮಠ, ರಾವಂದೂರು ಮಾದಾರ ಚೆನ್ನಯ್ಯ ಗುರುಪೀಠ, ಹಿರೇಸಿಂಧೋಗಿ ಮಾದಾರ ಮರುಳಸಿದ್ಧ ಪೀಠ ಮುಂತಾದ ಅನೇಕ ಅದಿಜಾಂಬವ ಮಠ’ಗಳಿಗೆ ಹಾಗೂ “ಜಂಬೂದ್ವೀಪದ ಕಳಸದಂತಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700