ಗುಬ್ಬಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ) ಗುಬ್ಬಿ ತಾಲೂಕು ತುಮಕೂರು ಜಿಲ್ಲೆವತಿಯಿಂದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಮಾರ್ಕಂಡೇಯ ಮುನಿ ಸ್ವಾಮಿಗಳಿಗೆ ನುಡಿನಮನ ಕಾರ್ಯಕ್ರಮವು ಗುಬ್ಬಿ ತಾಲೂಕು ಕಸಬಾ ಹೋಬಳಿ ರಂಗನಾಥಪುರ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ನಿಟ್ಟೂರು ರಂಗಸ್ವಾಮಿ ಗುಬ್ಬಿ ತಾಲೂಕು ಸಂಚಾಲಕರಾದ ಚೇಳೂರುಶಿವನಂಜಪ್ಪ ತಾಲೂಕು ಸಂಘಟನಾ ಸಂಚಾಲಕರಾದ ಕಡಬ ಶಂಕರ್, ನಟರಾಜು ಕುಂದರನಹಳ್ಳಿ ಶ್ರೀರಂಗಪ್ಪ ಬಸವರಾಜು ಮಾರಸಶೆಟ್ಟಿಹಳ್ಳಿ ಬಸವರಾಜು ಕಚೆನಹಳ್ಳಿ ಈಶ್ವರ ಅದಲಗೆರೆ ದೊಡ್ಡಯ್ಯ ಮಡೇನಹಳ್ಳಿ ಶಿಕ್ಷಕರಾದ ಕಲ್ಲೂರು ಶಿವಣ್ಣನವರು ಇತರೆಯವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಸಬಾ ಹೋಬಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೋಬಳಿ ಸಂಚಾಲಕರಾಗಿ ಬಸವರಾಜು ಮಡೇನಹಳ್ಳಿ ಸಂಘಟನಾ ಸಂಚಾಲಕರಾಗಿ ಮಹಾದೇವ್ ಅಮ್ಮನಘಟ್ಟ ಪುಟ್ಟರಾಜು ರಂಗನಾಥಪುರ ನರಸಿಂಹಮೂರ್ತಿ ಕೊಡಗಿಹಳ್ಳಿ ಮಹಾದೇವಯ್ಯ ಕಾಳೇನಹಳ್ಳಿ ಗಂಗರಾಜು ಲಕ್ಕೆನಹಳ್ಳಿ ರಾಘವೇಂದ್ರ ಲಕ್ಕೇನಹಳ್ಳಿ ನರಸಿಂಹಮೂರ್ತಿ ರಂಗನಾಥಪುರ ರಂಗರಾಜು ಲಕ್ಕೆನಹಳ್ಳಿ ರಂಗಸ್ವಾಮಿ R.N ರಂಗನಾಥಪುರ ಖಜಾಂಚಿಯಾಗಿ ರಾಜಣ್ಣ ಇವರನ್ನು ಆಯ್ಕೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಕಸಬಾ ಹೋಬಳಿಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700