ತುರುವೇಕೆರೆ: ತಾಲ್ಲೂಕಿನ ಕಸಬಾ ಮತ್ತು ಮಾಯಸಂದ್ರ ಹೋಬಳಿಯ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಸಾಲಾ ಜಯರಾಮ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಶಾಸಕರು ಮಾತನಾಡಿ , ಗ್ರಾಮಗಳ ಜನರಿಗೆ ನೀಡಿದಂತಹ ಭರವಸೆಯನ್ನು ನಾನು ಈಡೇರಿಸಿದ್ದೇನೆ. ಹಾಗೆಯೇ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಗ್ರಾಮಗಳಲ್ಲಿ ಮಣ್ಣು ರಹಿತ ರಸ್ತೆ ಗಳನ್ನಾಗಿ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.
ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆಗೆ ಯಾವಾಗಲೂ ಸಿದ್ದನಿದ್ದೇನೆ. ಗ್ರಾಮಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲಾಗುವುದು. ವಿವಿಧ ಗ್ರಾಮಗಳಲ್ಲಿ ಸುಮಾರು 95 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಚಿಕ್ಕೋನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಅಂದಾಜು ವೆಚ್ಚ 10 ಲಕ್ಷ, ಕಳ್ಳನಕೆರೆ ಗ್ರಾಮದಲ್ಲಿ ಸಿ.ಸಿ.ರಸ್ತೆ ಕಾಮಗಾರಿ ಅಂದಾಜು ವೆಚ್ಚ 20 ಲಕ್ಷ, ದೊಡ್ಡ ಮಲ್ಲಿಗೆರೆಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ಅಂದಾಜು ಮೊತ್ತ 25 ಲಕ್ಷ, ಚಿಕ್ಕ ಮಲ್ಲೀಗೆರೆ ಗ್ರಾಮದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ 20ಲಕ್ಷ ಕೋಡಿಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಅಂದಾಜು ವೆಚ್ಚ 20 ಲಕ್ಷ ರೂಪಾಯಿಗಳಾಗಿವೆ. ದೊಡ್ಡಮಲ್ಲಿಗೆರೆ ಗ್ರಾಮದಲ್ಲಿ 10 ಲಕ್ಷ ರೂಪಾಯಿ ಗಳ ವೆಚ್ಚದಲ್ಲಿ ಅಂಗನವಾಡಿ ಕಟ್ಟಡವನ್ನು ಕಟ್ಟಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಣಿ ಚಂಡೂರು ಗ್ರಾ. ಪಂಚಾಯತ್ ಅಧ್ಯಕ್ಷೆ ಶಾಮಲಾ. ಸದಸ್ಯ ಯಶೋಧರ . ಪಿ.ಡಿ.ಓ ಅಭಿ. ಸಿ.ಡಿ.ಪಿ.ಓ ಅರುಣ್ ಕುಮಾರ್. ಮುಖಂಡರಾದ ವಿ.ಬಿ ಸುರೇಶ್. ವೆಂಕಟರಾಮಯ್ಯ. ಮುದ್ದೇಗೌಡ . ಕೊಂಡಜ್ಜಿ ವಿಶ್ವನಾಥ್. ಅಧ್ಯಕ್ಷ ಮುತ್ತಣ್ಣ .ಮತ್ತು ಗ್ರಾಮಸ್ಥರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz