ಹಣದುಬ್ಬರದ ಬೇಗೆಯಲ್ಲಿ ಬಳಲಿದ್ದ ಜನತೆಗೆ ಬಿಗ್ ಶಾಕ್ ಸಿಕ್ಕಂತಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 100 ರಿಂದ 103 ರೂಪಾಯಿವರೆಗೆ ಏರಿಕೆಯಾಗಿದ್ದು, ಇದು ಗೃಹ ಬಳಕೆ ಸಿಲಿಂಡರ್ ಬಳಕೆದಾರರಿಗೆ ಅನ್ವಯ ಆಗಲ್ಲ. ಇಂದಿನಿಂದಲೇ ಈ ಬೆಲೆ ಜಾರಿಗೆ ಬರಲಿದ್ದು, ಬೆಂಗಳೂರಿನಲ್ಲಿ 1,813 ರೂ. ಇದ್ದ ಗ್ಯಾಸ್ ಬೆಲೆ 1,914.50ರೂ.ಗೆ ತಲುಪಿದೆ.


