ಕೊರಟಗೆರೆ: ತಾಲೂಕಿನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2022 ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು ಮತದಾರರು ತಮ್ಮ ಹಕ್ಕು ಮತ್ತು ಅಕ್ಷೇಪಣೆಗಳನ್ನು ತಿದ್ದುಪಡಿ ಸೇರ್ಪಡೆ ಮಾಡಲು ಆಥವಾ ತೆಗೆದುಹಾಕಲು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಅವಕಾಶವಿರುವುದಾಗಿ ಗ್ರೇಡ್ 2 ತಹಶೀಲ್ದಾರ್ ತಿಳಿಸಿದ್ದಾರೆ.
ಪತ್ರಿಕಾ ತಾಲೂಕು ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಿನಾಂಕ 21-11-2021 ಮತ್ತು 28-11-2021 ರಂದು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಹತ್ತಿರದ ಮತದಾರರ ನೋಂದಾಣಾಧಿಕಾರಿ, ವಾರ್ಡ್ ಕಛೇರಿ ಮತ್ತು ಹತ್ತಿರದ ಮತಗಟ್ಟೆಗಳಿಗೆ ಬೇಟಿ ನೀಡಿ ತಮ್ಮ ಹಕ್ಕು ಮತ್ತು ಅಕ್ಷೇಪಣೆಗಳನ್ನು ತಿದ್ದುಪಡಿ, ಸೇರ್ಪಡೆ ಮಾಡಲು ಅಥವಾ ತೆಗೆದುಹಾಕಲು ಅಗತ್ಯ ದಾಖಲಾತಿಗಳೊಂದಿಗೆ ನೀಡಬಹುದಾಗಿದೆ ಹಾಗೂ ತಮ್ಮ ಹೆಸರು ಇರುವುದನ್ನು ಪರಿಶೀಲಿಸಬಹುದಾಗಿದೆ ಎಂದರು.
ದಿನಾಂಕ 13-1-2022 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು, ಸಾರ್ವಜನಿಕರು ಆನ್ ಲೈನ್ ನಲ್ಲೂ ಸಹ ತಮ್ಮ ಹಕ್ಕು ಮತ್ತು ಅಕ್ಷೇಪಣೆಗಳನ್ನು ಅಗತ್ಯ ದಾಖಲಾಗಿಗಳೊಂದಿಗೆ ಸಲ್ಲಿಸಬಹುದಾಗಿದೆ, ದಿನಾಂಕ 01-01-2004ಕ್ಕೆ ಮುಂಚೆ ಜನಿಸಿದ ಎಲ್ಲಾ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700