ಚಿಕ್ಕಮಗಳೂರು: ನಗರ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಅವರು ವಾರ್ಡ್ ನಂಬರ್ 28ರ ಎಸಿಜಿ ಪಾಲಿಟೆಕ್ನಿಕ್ ಬೂತ್ ನಂಬರ್ 87 ರಲ್ಲಿ ಪತ್ನಿ ಪಲ್ಲವಿ ಜೊತೆ ಆಗಮಿಸಿ ಮತದಾನ ಮಾಡಿದರು.
ಮತದಾನ ಆರಂಭಗೊಂಡ ವೇಳೆಯಲ್ಲಿಯೇ ಮಂದ ಗತಿಯಲ್ಲಿ ಮತದಾನ ಆರಂಭಗೊಂಡಿತ್ತು. ಮತದಾನದಲ್ಲಿ ಮತದಾರರ ನಿರುತ್ಸಾಹ ಕಂಡು ಬಂದಿತು. ಇನ್ನೂ ಕೆಲವೆಡೆಗಳಲ್ಲಿ ಅಭ್ಯರ್ಥಿಗಳ ಪರ ಕಾರ್ಯಕರ್ತರು ಮನೆ ಮನೆಗಳಿಂದ ಜನರನ್ನು ವೋಟು ಹಾಕಿಸಲು ಕರೆತರುತ್ತಿರುವುದು ಕಂಡು ಬಂತು.
ಇನ್ನೂ ಅಂಡೆ ಛತ್ರದಲ್ಲಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy