ಮಂಡ್ಯ : ‘ಮತಾಂತರ ನಿಷೇಧ ಕಾಯ್ದೆ RSS ಅಜೆಂಡಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆ RSS ಅಜೆಂಡಾ, RSS ಹೇಳಿದಂತೆ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದನ್ನ ನಾನು ಅಧಿಕಾರದಲ್ಲಿದ್ದಾಗ ತಂದಿದ್ದು ಅಂತಾರೆ. ಆ ಬಿಲ್ ನ ನನ್ನ ಮುಂದೆ ಇಟ್ಟಿದ್ದರು. ಅದನ್ನ ಬರೆದಿದ್ದ ಎಲ್ಲರೂ RSS ನವರಾಗಿದ್ದರು. ನಾನು ಆಗ ಆಂಜನೇಯನಿಗೆ ಅದನ್ನ ಮುಗಿಸಿಬಿಡು ಅಂತಾ ಹೇಳಿದ್ದೆ.
ಅದರಂತೆ ಆಂಜನೇಯ ಅದನ್ನ ತಿರಸ್ಕರಿಸುವಂತೆ ಬರೆದಿದ್ದರು. ಆ ಬಿಲ್ ತಂದಿದ್ದು ಯಡಿಯೂರಪ್ಪ ಸರ್ಕಾರ ಇದ್ದಾಗ, ಅದನ್ನ ಸದನದಲ್ಲಿ ನಾನು ಯಡಿಯೂರಪ್ಪಗೆ ಹೇಳಿದೆ. ಯಡಿಯೂರಪ್ಪ ಅದನ್ನ ಒಪ್ಪಿಕೊಂಡರು ಎಂದು ಹೇಳಿದರು.
ಇನ್ನು ಈಶ್ವರಪ್ಪ ಒಬ್ಬ ಪೆದ್ದ. ಇದು RSSನವರು ಮಾಡಿರೋದು ಅಂತಾ ಹೇಳಿದೆ. ಹೌದು ಅಂತಾ ಈಶ್ವರಪ್ಪ ಸದನದಲ್ಲಿ ಒಪ್ಪಿಕೊಂಡ. ಸಂವಿಧಾನದಲ್ಲೇ ಅವಕಾಶ ಇದೆ. ಪ್ರೀತಿಸಿ ಮದುವೆ ಆಗೋದನ್ನ ಪ್ರಶ್ನೆ ಮಾಡೋಕೆ ಅವನ್ಯಾರು ಎಂದು ಪ್ರಶ್ನಿಸಿದರು.
ನಾವು ಜನಪರ ಕಾನೂನು ತಂದ್ರೆ, ಇವರು ಜನ ವಿರೋಧಿ ಕಾನೂನು ತಂದಿದ್ದಾರೆ. ಬಿಜೆಪಿಯವರದ್ದು ಜನ ವಿರೋಧಿ RSS ಸಿದ್ಧಾಂತ.ಕಾಂಗ್ರೆಸ್ ಪಕ್ಷದ್ದು ಜನಪರವಾದ ಸಿದ್ಧಾಂತ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮೇಕೆದಾಟು ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ತಮಿಳುನಾಡಿಗೆ ವಿರೋಧವಲ್ಲ, ರಾಜಕೀಯಕ್ಕಾಗಿ ತಮಿಳುನಾಡಿನವರ ಕ್ಯಾತೆ. ಇದು ಕುಡಿಯುವ ನೀರಿನ ಯೋಜನೆ. ನಮ್ಮ ಹಕ್ಕನ್ನ ನಾವು ಪಡೆದುಕೊಳ್ಳಲಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.
ಬಿಜೆಪಿಯವರು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಕರ್ನಾಟಕವನ್ನ ಸ್ವರ್ಗ ಮಾಡ್ತೀನಿ ಅಂತಾರೆ. ಅವರು ಜಾರಿಗೆ ತರದಿರೋದಕ್ಕೆ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy