ಹಿರಿಯೂರು: ಮಹಾಶಿವಶರಣ ಹರಳಯ್ಯ ಗುರುಪೀಠದ ವತಿಯಿಂದ ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ ಮೇ 31 ಮಂಗಳವಾರ ಬೆಳಿಗ್ಗೆ 10:30 ಕ್ಕೆ ಮಹಾ ಶಿವಶರಣ ಹರಳಯ್ಯಜಯಂತಿ , ಬಸವೇಶ್ವರ ಜಯಂತಿ , ಬುದ್ಧಜಯಂತಿ , ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ , ಹಾಗೂ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದ್ದಾರೆ .
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು ತೊ೦ಟದಾರ್ಯ ಸ್ವಾಮೀಜಿ , ಮೈಸೂರಿನ ಆರ್ಗಾನಿಕ್ ನ ಸಂಸ್ಥಾಪಕ ನಾಗರಾಜ್ ರವರಿಗೆ ಶಿವಶರಣ ಹರಳಯ್ಯ ಯುವ ಪ್ರಶಸ್ತಿ , ಬಸವ ಟಿವಿಯ ಸಂಸ್ಥಾಪಕ ಕೃಷ್ಣಪ್ಪನವರಿಗೆ ಮಹಾ ಶಿವಶರಣ ಶೀಲವಂತ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಮಹಾ ಶಿವಶರಣ ಶೀಲವಂತ ಯುವ ಪ್ರಶಸ್ತಿ ನೀಡಲಾಗುವುದು ಎಂದರು.
ನಾಯಕರು ಮಾತನಾಡಿ , ಈ ಬಾರಿ ಮೊದಲಿನ ಪ್ರಶಸ್ತಿ ಜೊತೆಗೆ ಮೂರು ಹೊಸ ಪ್ರಶಸ್ತಿಗಳನ್ನು ನೀಡಲಾಗುತ್ತದೆ . ಬ್ರಹ್ಮ ಕಾರ್ಯಕ್ರಮಕ್ಕೆ ಜಿ ವಾಹಿನಿ ಮುಖ್ಯಸ್ಥ ಮಹಾಶಿವಶರಣ ಹರಳಯ್ಯ ಪ್ರಶಸ್ತಿ , ಅಮೃತ್ ಮಠ ಮುಂಡರಗಿಯ ಶ್ರೀ ನಿಜಗುಣ ಪ್ರಭು, ರಾಘವೇಂದ್ರ ಹುಣಸೂರು , ತೊಂಟದಾರ್ಯ ಜ್ಞಾನಪ್ರಕಾಶ ಸ್ವಾಮೀಜಿಗಳು , ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಇನ್ನೂ ಹಲವು ಸ್ವಾಮೀಜಿಗಳು ,ರಾಜಕೀಯ ಭಾಗವಹಿಸುವರು ಎಂದು ತಿಳಿಸಿದ್ದಾರೆ .
ಈ ಸಂಧರ್ಭದಲ್ಲಿ ಜಿ ಎಲ್ ಮೂರ್ತಿ , ಮಟ್ಟಿ ಹನುಮಂತರಾಯಪ್ಪ , ಕಿರಣ್ ಪಟ್ನಹಳ್ಳಿ , ಎಂ ಡಿ ರಮೇಶ್ , ಕರಿಯಪ್ಪ , ಗಾಂಧಿನಗರ ಮಹಂತೇಶ್ , ಕರ್ಣ ಹಾಜರಿದ್ದರು . ಪ್ರದೀಪ್ , ನಂದಕುಮಾರ್ , ರಂಗಪ್ಪ ಯಾದವ್ , ಉಪಸ್ಥಿತರಿದ್ದರು
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB