ಇಲ್ಲೊಬ್ಬಳು ಸೊಸೆ ಅತ್ತೆಯ ಮೇಲಿನ ಸಿಟ್ಟಿನಿಂದ 50 ರೂಪಾಯಿ ನೋಟು ತೆಗೆದುಕೊಂಡು ಅದರಲ್ಲಿ ಅತ್ತೆಯ ಮೇಲಿನ ಸಿಟ್ಟು ತೋರಿಸಿದ್ದಾಳೆ. ಈಕೆಯ ಕೆಲಸ ಇದೀಗ ವೈರಲ್ ಆಗುತ್ತಿದೆ.
ಅತ್ತೆಗೆ ಒಳ್ಳೆಯದಾಗಲಿ ಎಂದು ಕೆಲವು ಸೊಸೆಯರು ದೇವರಲ್ಲಿ ಕೇಳಿಕೊಂಡಿದ್ದರೆ ಇಲ್ಲೊಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವರಿಗೆ ಹರಕೆ ನೀಡಿದ್ದಾಳೆ. ಅಂದ ಹಾಗೆಯೇ ಇದು ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವರಲ್ಲಿ ಬೇಡಿಕೊಂಡಿರುವ ಪರಿ. ಈ ವಿಚಿತ್ರವನ್ನು ಕಂಡು ಇದೀಗ ಎಲ್ಲರು ಕೂಡ ಬೆರಗಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ಗುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟ್ ನಲ್ಲಿ ಇಂತಹದ್ದೊಂದು ಬರಹ ಪತ್ತೆಯಾಗಿದೆ.
ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಅನ್ನೋದನ್ನ ಬರೆಯಲಾಗಿದೆ. ಇದನ್ನು ಕಂಡು ಕೆಲವರು ಇದೆಂಥ ಕಾಲವಯ್ಯ ಎಂದು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ ದತ್ತನ ಹುಂಡಿ ಎಣಿಕೆ ಸಂದರ್ಭದಲ್ಲಿ ವಿಚಿತ್ರವಾಗಿ ಬರೆದಿರುವ 50 ರೂಪಾಯಿ ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


