ತುರುವೇಕೆರೆ: ತಾಲೂಕಿನಲ್ಲಿ ಮಾಯಸಂದ್ರ ಪ್ರತಿಷ್ಠಿತ ಹೋಬಳಿಯಂದೇ ಹೆಸರಾಗಿದೆ. ಆದರೆ ಹೆಸರಿಗಷ್ಟೇ ಪ್ರತಿಷ್ಠೆ ಪ್ರತಿಷ್ಠಿತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ,
ಇಂತಹ ಪ್ರತಿಷ್ಠಿತ ಮಾಯಸಂದ್ರ ಗ್ರಾಮದ ಅಂಗನವಾಡಿ ಕೇಂದ್ರ (ಡಿ) ದುಸ್ಥಿತಿಯಲ್ಲಿದ್ದು, ಅಂಗನವಾಡಿ ಕೇಂದ್ರದ ಕೊಠಡಿಯ ಮೇಲ್ಚಾವಣಿ ಭಾಗವು ಎಂತಹ ಸಂದರ್ಭದಲ್ಲೂ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೊಠಡಿಯಲ್ಲಿ ಸಣ್ಣ ಮಕ್ಕಳು ಆಟ ಪಾಠವನ್ನು ಕಲಿಯುತ್ತಿದ್ದಾರೆ.
ಮಳೆಗಾಲದಲ್ಲಿ ಅದೆಷ್ಟು ಬಾರಿ ಮೇಲ್ಚಾವಣಿಯ ಹಂಚುಗಳು ಕೆಳಗೆ ಬಿದ್ದಿರುವ ಘಟನೆಗಳು ನಡೆದಿವೆ ಇಂತಹ ಕೊಠಡಿಯಲ್ಲಿ ಮಕ್ಕಳು ಕಲಿಕೆಯ ಸಂದರ್ಭದಲ್ಲಿ ಮಳೆ ಗಾಳಿಯಂತಹ ಸಂದರ್ಭ ಉದ್ಭವಿಸಿದಾಗ ಸಣ್ಣ ಮಕ್ಕಳ ಗತಿಯೇನು? ಎಂಬ ಪ್ರಶ್ನೆ ಗ್ರಾಮದ ಪ್ರಜ್ಞಾವಂತ ಯುವಕರು ಹಾಗೂ ಗ್ರಾಮದ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ.
ಹಲವು ತಿಂಗಳುಗಳಿಂದ ಈ ಅಂಗನವಾಡಿ ಕೇಂದ್ರವು ಇಂತಹ ದುಸ್ಥಿತಿಯಲ್ಲಿದ್ದು, ಇದರಲ್ಲಿ ಮಕ್ಕಳನ್ನು ಕೂರಿಸಿಕೊಂಡು ಆಟ-ಪಾಠಗಳನ್ನು ಕಲಿಸುತ್ತಿದ್ದಾರೆ. ಇದುವರೆಗೂ ಪರ್ಯಾಯ ವ್ಯವಸ್ಥೆಯಾಗಿ ಬೇರೊಂದು ಕೊಠಡಿಗೆ ಅಂಗನವಾಡಿ ಕೇಂದ್ರ ವರ್ಗಾಯಿಸಿಲ್ಲ. ಹಣವಂತರು ತಮ್ಮ ಮಕ್ಕಳಿಗೆ ಈ ಅಂಗನವಾಡಿ ಕೇಂದ್ರದ ದುಸ್ಥಿತಿ ಕಂಡು ಖಾಸಗಿ ಕಾನ್ವೆಂಟ್ ಗಳಿಗೆ ಎಲ್ ಕೆಜಿ-ಯುಕೆಜಿ ತರಗತಿಗಳಿಗೆ ನೇರವಾಗಿ ದಾಖಲು ಮಾಡುತ್ತಿದ್ದಾರೆ. ಬಡವರು ದೇವರೇ ಗತಿ ಎಂದು ಇದೇ ಅಂಗನವಾಡಿ ಕೇಂದ್ರಕ್ಕೆ ದಾಖಲಿಸುತ್ತಿದ್ದಾರೆ.
ಬಡವರ ಮಕ್ಕಳಲ್ಲವೇ ಏನಾದರೂ ಆಗಲಿ ಬಿಡು ಎಂಬ ತಾತ್ಸಾರ ಮೂಡಿದೆಯೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ರೀತಿಯ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಮುಂದಾದರು ಸರ್ಕಾರಗಳು ಸ್ಥಳೀಯ ಜನಪ್ರತಿನಿಧಿಗಳು ಸ್ಥಳೀಯ ಅಧಿಕಾರಿಗಳು ಈ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಯ ಅಥವಾ ನೂತನ ಕೊಠಡಿಯ ಮಾಡುವಲ್ಲಿ ಮುಂದಾಗುವರೇ ಕಾದುನೋಡಬೇಕು?
ವರದಿ: ವೆಂಕಟೇಶ ಜೆ.ಎಸ್.(ವಿಕ್ಕಿ) ಮಾಯಸಂದ್ರ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700