ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರದಲ್ಲಿ ಇಂದು 9ನೇ ವರ್ಷದ ಹನುಮ ಜಯಂತ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು.
ಗ್ರಾಮದ ಯುವಕರು ಮತ್ತು ಹಿರಿಯರು ಎಲ್ಲರೂ ಸೇರಿ ಕಳೆದ ಒಂದು ವಾರದಿಂದ ಹನುಮ ಜಯಂತಿ ಆಚರಣೆಗೆಂದು ಇಡೀ ಊರನ್ನು ಕೇಸರಿ ಬಂಟಿಂಗ್ಸ್ ಮತ್ತು ಬಾವುಟಗಳನ್ನು ಕಟ್ಟುವುದರ ಮೂಲಕ ಕೇಸರಿಮಯಗೊಳಿಸಿದ್ದಾರೆ.
ಇಷ್ಟಲ್ಲದೇ ಹನುಮ ಜಯಂತಿಯಾದ ಇಂದು ಸರ್ವ ಧರ್ಮದವರಿಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿ ಸಾವಿರಾರು ಜನರಿಗೆ ಊಟ ಉಣಬಡಿಸಿದರು.
ಈ ಕಾರ್ಯಕ್ರಮವು ತಾಲ್ಲೂಕಿನಲ್ಲಿ ಬಹಳ ಮೆಚ್ಚುಗೆ ಗಳಿಸಿತು. ತಾಲ್ಲೂಕಿನ ಶಾಸಕರಾದ ಮಸಾಲ ಜಯರಾಮ್ ರವರು ಹನುಮ ದೇವಸ್ಥಾನಕ್ಕೆ ಆಗಮಿಸಿ ಹನುಮನ ಕೃಪೆಗೆ ಪಾತ್ರರಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy