ಮಾಧ್ಯಮಗಳು ಸಮಾಜ ಮತ್ತು ಸರ್ಕಾರದ ನಡುವೆ ಸೌಹಾರ್ದದ ಸೇತುವೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ. ಕೆ. ರವಿ ಅವರ ಸಂಪಾದಕತ್ವದ ‘ಮೀಡಿಯಾ ಆಫ್ ದಿ ಮಿಲೇನಿಯಂ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಧ್ಯಮ ಸಾಕ್ಷರತೆ ಕುರಿತಾದ ಈ ಹೊಸ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವನ್ನು ವಿಸ್ತರಿಸಲಿ. ವೃತ್ತಿಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆ ಎಂದು ತಿಳಿಸಿದರು.


