ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ನಾರಾಯಣ ನೇತ್ರಾಲಯವು ನೇತ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಧರಿಗೆ ದೃಷ್ಟಿ ನೀಡಲು ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದೆ.
ಮರಣದ ಬಳಿಕ ಕಣ್ಣುಗಳ ದಾನದಿಂದ ‘ಕಾರ್ನಿಯಲ್ ಅಂಧತ್ವ’ಕ್ಕೆ ಒಳಗಾದವರಿಗೆ ದೃಷ್ಟಿ ನೀಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನದ ಮಹತ್ವ ಅರಿತು ಕಣ್ಣುಗಳನ್ನು ದಾನ ಮಾಡಬೇಕು. ನೇತ್ರದಾನ ಪಾಕ್ಷಿಕದ ಭಾಗವಾಗಿ ಸೆ. 2ರ ರಾತ್ರಿ 11. 59 ಕ್ಕೆ ‘ಮಧ್ಯರಾತ್ರಿ ಓಟ’ ಹಮ್ಮಿಕೊಳ್ಳಲಾಗಿದೆ.


