ಕುಣಿಗಲ್: ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲಾಗುತ್ತಿದೆ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಬೋಕರ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪ ಕೇಳಿಬಂದಿದೆ. ಇದನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು ಇಲ್ಲ ಎಂದರೆ ಸಂಬಂಧಪಟ್ಟ ಅಧಿಕಾ ರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಎಚ್ಚರಿಕೆ ನೀಡಿದರು.
ಅವರು ಪಟ್ಟಡದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ರೈತರು ಆರ್ಥಿಕವಾಗಿ ಸಬಲರಾಗಲಿ ಎಂದು ರೈತ ಬೆಳೆದಂತ ರಾಗಿಗೆ ಪ್ರತಿ ಕ್ವಿಂಟಾಲಿಗೆ 4,886 ರೂಗಳನ್ನು ನಿಗದಿ ಮಾಡಿದೆ ಪ್ರತಿ ರೈತರಿಂದ 1 ಎಕರೆಗೆ ಕನಿಷ್ಠ 10 ಕ್ವಿಂಟಾಲ್ ನಿಂದ ಗರಿಷ್ಠ 50 ಕ್ವಿಂಟಾಲ್ ಮೀರದಂತೆ ರಾಗಿಯನ್ನ ಖರೀದಿ ಮಾಡಲಾಗುವುದು, ಈ ಬಾರಿ ಸರ್ಕಾರ ಹದಿನೈದು ಕೋಟಿ ರೂ.ಗಳ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ರಾಗಿ ಬೆಳೆದಂತಹ ರೈತರು ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಹಾಕಬೇಕು, ರಾಗಿ ನೋಂದಣಿಗೆ ಹಾಗೂ ಮಾರಾಟಕ್ಕೆ ಎರಡು ಬಾರಿ ಬಯೋಮೆಟ್ರಿಕ್ ಬಳಕೆ ಮಾಡಲಾಗುತ್ತದೆ ರಾಗಿ ನೋಂದಣಿ ಕಾರ್ಯ ಅಕ್ಟೋಬರ್ 1 ರಿಂದ ಡಿಸೆಂಬರ್ 15 ರವರೆಗೆ ನೊಂದಣಿ ಮಾಡಲಾಗುವುದು ನಂತರ ಜನವರಿ 1/26 ರಿಂದ 31 ಮಾರ್ಚ್ ವರೆಗೆ ರಾಗಿ ಖರೀದಿಯನ್ನು ಮಾಡಲಾಗುವುದು ಎಂದು ತಿಳಿಸಿದರು.
ರಾಗಿ ಮಾರಾಟ ಮಾಡುವ ರೈತರು ಕೃಷಿ ಇಲಾಖೆಯಿಂದ ಪ್ರೂಟ್ಸ್ ಐಡಿಯನ್ನು ಹೊಂದಿರಲೇಬೇಕು ಜೊತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಂತಹ ರೈತರು ಖರೀದಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಮೂಲಕ ತಮ್ಮ ಹೆಸರನ್ನ ನೋಂದಾಯಿಸಬಹುದೆಂದು ತಿಳಿಸಿದ ಅವರು, ರಾಗಿ ಮಾರಾಟ ಮಾಡುವ ರೈತರು ಮಾರಾಟ ಮಾಡಿದ ದಿನವೇ ರಾಗಿ ಖರೀದಿ ಅಧಿಕಾರಿಯಿಂದ ಗ್ರಯ್ನ್ ವೋಚರ್ ಕೇಳಿ ಪಡೆದುಕೊಳ್ಳುವುದು ರಾಗಿ ಮಾರಾಟ ಮಾಡಿದ ರೈತರಿಗೆ ಸರ್ಕಾರ ರೈತರ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ತಮ್ಮ ಹಣವನ್ನು ಬ್ಯಾಂಕ್ ರೈತರ ಖಾತೆಗಳಿಗೆ ಹಾಕಲಾಗುವುದು ಎಂದರು.
ರಜೆ ದಿನವನ್ನು ಹೊರತುಪಡಿಸಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ವರೆಗೆ ರೈತರು ರಾಗಿ ನೋಂದಣಿಗೆ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಹಲವಾರು ವಿಚಾರಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ಸೌಮ್ಯ ಜಿಲ್ಲಾ ವ್ಯವಸ್ಥಾಪಕ ತನ್ನೀರ್, ತಹಶೀಲ್ದಾರ್ ರಶ್ಮಿಯು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗನಾಥ್, ಆಹಾರ ಶಿರಸ್ತೆದಾರ್ ಶ್ರೀ ಹರ್ಷ, ಆಹಾರ ನಿರೀಕ್ಷಕರಾದ ಚೆನ್ನಮ್ಮ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



