ತುಮಕೂರು: ಶಾಸಕ ಎಸ್.ಆರ್. ಶ್ರೀನಿವಾಸ್ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನೆಲೆ ಇಬ್ಬರು ಸಚಿವರ ವಿರುದ್ಧ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಸಿಡಿದೆದ್ದಿದ್ದಾರೆ.
ಸಚಿವ ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ತೊಘಲಕ್ ಆಡಳಿತ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರು ಸಚಿವರಿಂದ ತೊಘಲಕ್ ಆಡಳಿತ ನಡೆಯುತ್ತಿದೆ. ಜಿಲ್ಲೆಯಲ್ಲಿ ಏನ್ ನಡಿತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡ್ಬೇಕು ಅದನ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮನ್ನ ಮೀಟಿಂಗ್ ಗೂ ಸಹ ಕರಿತಿಲ್ಲ. ಏನ್ ಮಾಡ್ತಿವಿ ಅಂತ ನಮ್ಮನ್ನ ಕೇಳ್ತಿಲ್ಲ. ತೊಘಲಕ್ ಆಡಳಿತ ಜಿಲ್ಲೆಯಲ್ಲಿ ನಡಿತಿದೆ. ಪರಮೇಶ್ವರ್ ಗೆ ಪೋನ್ ಮಾಡಿ ಏನ್ ಹೇಳ್ಬೇಕು ಅದನ್ನೆಲ್ಲಾ ಹೇಳಿದಿನಿ. ಆ ಇಬ್ಬರು ಸಾಮಾಜಿಕ ನ್ಯಾಯ ಕೊಡೋ ಹರಿಕಾರರು. ಎಡಗೈ ಜನಾಂಗಕ್ಕೆ ಅನ್ಯಾಯ ಆಗಿದೆ. ಇಡೀ ಜಿಲ್ಲೆಯಲ್ಲಿ ಎಸ್ ಟಿ, ಭೋವಿಗಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಲಗೈ ಸಮುದಾಯದವರು ಮಿನಿಸ್ಟರ್ ಇದ್ದಾರೆ. ಲಿಂಗಾಯತರು, ಒಕ್ಕಲಿಗರು ಎಂಎಲ್ ಎಗಳು ಇದ್ದಾರೆ. ಅನ್ಯಾಯ ಆಗಿರೋದು ಹಿಂದುಳಿದ ವರ್ಗ ಬಲಗೈ ಸಮುದಾಯಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಬರುತ್ತೆ, ಯಾರಾದ್ರು ಒಬ್ಬ ಎಡಗೈ ಸಮುದಾಯದವರನ್ನ ಅಧ್ಯಕ್ಷರನ್ನಾಗಿ ಮಾಡಿದ್ರೆ. ಇವರು ಸಾಮಾಜಿಕ ನ್ಯಾಯದ ಹರಿಕಾರರು ಅಂತ ನಾನು ಅಂದುಕೊಳ್ತಿನಿ, ನಾನು ಸ್ವಾಗತ ಮಾಡ್ತಿನಿ ಎಂದರು.
ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರ ಇದೆ. ಆ ಮೀಸಲು ಕ್ಷೇತ್ರದಲ್ಲಿ ಒಬ್ಬರು ಭೋವಿ ಜನಾಂಗ, ಮತ್ತೊಬ್ಬರು ಬಲಗೈ ಜನಾಂಗ ಗೆದ್ದಿದ್ದಾರೆ. ಎಡಗೈ ನವರು ಇನ್ನು ಶೋಷಿತರಾಗಿಯೇ ಇದ್ದಾರೆ. ಈ ಸಮುದಾಯಕ್ಕೆ ನ್ಯಾಯ ಸಿಗ್ಬೇಕು ಅಂದ್ರೆ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಗೆ ನಾಮಿನಿ ಮಾಡಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ್ದು ಇದರಲ್ಲಿ ಏನು ಪಾತ್ರ ಇಲ್ಲ. ಇಬ್ಬರು ಸಚಿವರ ವರ್ತನೆ ಬಗ್ಗೆ ನಾನು ಸಿಎಂ ಗಮನಕ್ಕೆ ತಂದಿದ್ದೆ. ಸಹಕಾರ ಸಚಿವ ಹಾಗೂ ಗೃಹ ಸಚಿವರಿಗೆ ಹೇಳ್ತಿನಿ ಅಂತ ಹೇಳಿದ್ರು. ಜಿಲ್ಲೆಯಲ್ಲಿ ಯಾರದ್ದು ನಡಿತಿದೆ, ಏನ್ ನಡಿತಿದೆ ಯಾರಿಗೂ ಗೊತ್ತಾಗ್ತಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಗೆ ನಾಮಿನಿ ಸದಸ್ಯರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಮಾತು ಎತ್ತಿದ್ದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡ್ತಿವಿ ಅಂತಾರೆ. ನೋಡಿದ್ರೆ ಶೋಷಿತರನ್ನ ಇವರು ನಿಷ್ಕೃಷ್ಟವಾಗಿ ಕಾಣ್ತಿದ್ದಾರೆ. ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲೆಯಲ್ಲಿ ಒಬ್ಬರನ್ನು ಮಾತಾಡಿಸಿಲ್ಲ. ಇದು ಒಂಥರ ತೊಘಲಕ್ ದರ್ಬಾರ್ ನಡಿತಿದೆ. ಎಲ್ಲರನ್ನೂ ನಿರ್ಲಕ್ಷ್ಯ ಮಾಡಿದ್ದಾರೆ. ಯಾವ್ ಎಂಎಲ್ ಎ ಹತ್ರನು ಮಾತಾಡಿಲ್ಲ. ಇವರಿಬ್ಬರಿದ್ದರು ಸಾಕು ಇಡೀ ಜಿಲ್ಲೆಯನ್ನೇ ಕಂಟ್ರೋಲ್ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 11 ಕ್ಕೆ 11 ಗೆಲ್ಲಿಸಿಕೊಂಡು ಬರ್ತಾರೆ. ಬೇರೆಯವರು ಯಾರು ಬೇಡ, ಇವರಿಬ್ಬರು ಇದ್ರೆ ಎಲ್ಲಾ ಆಗಿಹೋಗುತ್ತೆ. ನನಗೆ ಕಾಂಗ್ರೆಸ್ ಪಕ್ಷದಿಂದ ತಪ್ಪು ಮಾಡಿಲ್ಲ. ನಾವು ಎಂಎಲ್ ಎ ಗಳಿದ್ದೀವಿ, ನಮ್ಮನ್ನ ಕೇಳಲಿಲ್ಲವಲ್ಲ ಅನ್ನೋದು ನಮಗೆ ಅಸಮಾಧಾನ ಇದೆ ಎಂದರು.
ಮೊನ್ನೆ ಸಿಎಲ್ ಪಿ ಮೀಟಿಂಗ್ ಇತ್ತು. ಆ ಮೀಟಿಂಗ್ ಬಳಿಕ ಎಲ್ಲರೂ ಸೇರಿ ಗೃಹ ಸಚಿವ ಪರಮೇಶ್ವರ್ ಜೊತೆ ಮಾತಾಡಿದ್ದೀವಿ. ರಾಜಣ್ಣ ಸಹ ಇದ್ರು, ಮೀಟಿಂಗ್ ಕರೆಯುತ್ತೇವೆ ಅಂದ್ರು ರಾಜಣ್ಣ ನಾನು ಬರ್ತಿನಿ ಅಂದ್ರು. ಅದಾದ ಮೇಲೆ ಎಲ್ಲಿದ್ದೀರಾ..? ಯಾರು, ಏನು ಒಂದು ಗೊತ್ತಿಲ್ಲ. ಒಂದು ರೀತಿಯಲ್ಲಿ ತೊಘಲಕ್ ಆಡಳಿತ ನಡೆಸ್ತಿದ್ದಾರೆ. ಸರ್ಕಾರದ ವಿರುದ್ಧ ನನ್ನ ಅಸಮಾಧಾನ ಇಲ್ಲ. ಸಚಿವರ ವಿರುದ್ಧವೂ ಅಸಮಾಧಾನ ಇಲ್ಲ. ಅವರ ನಡವಳಿಕೆ ವಿರುದ್ಧ ಅಸಮಾಧಾನ ಇರೋದು. ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಲ್ವಾ.? ನಮ್ಮಿಂದ ತಾನೆ ಇವರು ಗೆದ್ದು ಮಿನಿಸ್ಟರ್ ಆಗಿದ್ದು. ವೆಂಕಟೇಶ್ ನಾ ನಾಮಿನಿ ಮಾಡ್ತಿವಿ ಅಂತ ಒಂದು ಮಾತು ಕೇಳ್ಬೆಕಿತ್ತು ಅಲ್ವಾ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4