ಕೊರಟಗೆರೆ: ಮೈಕ್ರೋ ಪೈನಾನ್ಸ್ ಕಂಪನಿ ಗೂಂಡಾಗಳ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ಶೋಷಣೆ ಮಾಡಿದ್ರೇ ನಾನು ಮತ್ತು ನಮ್ಮ ಸರಕಾರ ಸುಮ್ಮನೇ ಕೂರೋದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸಾಲದ ಕಿರುಕುಳದಿಂದ ಊರನ್ನೇ ಬಿಟ್ಟಿದ್ದ ಬಡ ಕಾರ್ಮಿಕನ ಮನೆಗೆ ಭೇಟಿ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ ವೈಯಕ್ತಿಕವಾಗಿ 50 ಸಾವಿರ ಧನಸಹಾಯ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕೋಟ್ಯಾಂತರ ಜನರು ಸುಮಾರು 59 ಸಾವಿರ ಕೋಟಿ ಸಾಲವನ್ನ ಅಧಿಕೃತ ಬ್ಯಾಂಕಿನವರು ಗ್ರಾಮದ ಗ್ರಾಹಕರಿಗೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಕಂಪನಿಯವರು ಮತ್ತೆ ದಬ್ಬಾಳಿಕೆ ನಡೆಸಿದ್ರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಎಸ್ಪಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಮಿಳುನಾಡಿನ ಪೈವ್ ಸ್ಟಾರ್ ಪೈನಾನ್ಸ್ ಕಂಪನಿಯವ್ರು ತುಮಕೂರಿಗೆ ಬಂದು ಇಂತಹ ದಬ್ಬಾಳಿಕೆಯ ಕೆಲಸ ಮಾಡ್ತೀದ್ದಾರೆ ಅವರ ಮೇಲೆ ಕಾನೂನು ಕ್ರಮ ಆಗಿದೆ ಎಂದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಮಾರುತಿ ಮತ್ತು ವಿನುತ ಮನೆಗೆ ಭೇಟಿ ನೀಡಿ, ಮಕ್ಕಳಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಧೈರ್ಯ ತುಂಬಿದರು.
ಪೈವ್ ಸ್ಟಾರ್ ಪೈನಾನ್ಸ್ ಕಂಪನಿಯಿಂದ ಮಾರುತಿ ಕಳೆದ ನಾಲ್ಕು ವರ್ಷದ ಹಿಂದೆ 2 ಲಕ್ಷ 50 ಸಾವಿರ ಸಾಲ ಪಡೆದು ಅದಕ್ಕೆ ಬಡ್ಡಿ ಸೇರಿಸಿ 4 ಲಕ್ಷ 50 ಸಾವಿರ ಅಸಲು ಪಾವತಿಸಿದ್ದರು. ಆದರೂ ಮತ್ತೆ ಕಿರುಕುಳ ನೀಡಿ ಮನೆಯ ಪತ್ರವನ್ನು ಪಡೆದಿರೋದು ಗಮನಕ್ಕೆ ಬಂದಿದೆ ಎಂದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx