ಬೆಂಗಳೂರು: ಫುಡ್ ಡೆಲಿವರಿ ಬಾಯ್ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಡೆಲಿವರಿ ಬಾಯ್ ಬಿ.ಆಕಾಶ್ ಆರೋಪಿಯಾಗಿದ್ದಾನೆ.
ಡೆಲಿವರಿ ಬಾಯ್ ಆಕಾಶ್ ಬಿ ಎಂಬುವಾತ ಕುಡಿಯಲು ನೀರು ಕೇಳಿ ಮನೆಗೆ ನುಗ್ಗಿ ಯುವತಿಯ ಕೈಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾನೆ. ಇಲ್ಲಿನ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ.
ನೀರು ಕುಡಿಯುವ ನೆಪದಲ್ಲಿ ಮನೆ ಒಳಗಡೆ ಎಂಟ್ರಿ ಕೊಟ್ಟಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ.
ಘಟನೆ ಸಂಬಂಧ ಯುವತಿ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


