ನಮ್ಮತುಮಕೂರು ವಿಶೇಷ ವರದಿ:
ತುಮಕೂರು: ಭೂಚಕ್ರ ಗೆಡ್ಡೆಗೆ ಭಾರೀ ಬೇಡಿಕೆ ಇದೆ. 15 ವರ್ಷಕ್ಕೂಮ್ಮೆ ಬಿಡುವ ಗೆಡ್ಡೆ ಬಹಳ ಅಪರೂಪದ ಗೆಡ್ಡೆಯಾಗಿದೆ. ಆದ್ರೆ ಭೂಚಕ್ರ ಗೆಡ್ಡೆ ಎಂದು ಕತ್ತಾಳೆ ಗೆಡ್ಡೆಯನ್ನು ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸುರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಭೂಚಕ್ರ ಗೆಡ್ಡೆ ಎಂದು ಕತ್ತಾಳೆ ಗೆಡ್ಡೆ ನೀಡುತ್ತಿರುವ ಕೃತ್ಯವನ್ನು ತಿಪಟೂರಿನ ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ. ಕತ್ತಾಳೆ ಗೆಡ್ಡೆಯ ಎಳೆ ತೆಗೆದು ನಿಂಬೆಹಣ್ಣು, ಉಪ್ಪು ಖಾರ ಹಚ್ಚಿ ಮಾರಾಟ ಮಾಡುತ್ತಿರುವ ಕೃತ್ಯ ಬಯಲಾಗಿದೆ.
ಕತ್ತಾಳೆ ಗೆಡ್ಡೆಗೆ ಕೆಮ್ಮಣ್ಣು ಬಳಿದು ಭೂಚಕ್ರ ಗೆಡ್ಡೆ ಎಂದು ದುಷ್ಕರ್ಮಿಗಳು ನಂಬಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಗೆಡ್ಡೆಗೆ ಭಾರೀ ಬೇಡಿಕೆ ಇದೆ. ಒಂದು ಎಳೆಗೆ 20 ರೂಪಾಯಿಯಂತೆ ಕತ್ತಾಳೆ ಗೆಡ್ಡೆಯನ್ನು ಭೂಚಕ್ರ ಗೆಡ್ಡೆ ಎಂದು ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಬೆಂಗಳೂರಿಗೂ ರವಾನೆ ಮಾಡಿ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಕತ್ತಾಳೆ ಗೆಡ್ಡೆಯನ್ನು ಭೂಚಕ್ರ ಗೆಡ್ಡೆಯಂತೆ ಸಿದ್ಧಪಡಿಸುತ್ತಿರುವ ಸ್ಥಳವನ್ನು ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA