ಕೋಲಾರ: ಜಮೀನು ಪೋಡಿ ದುರಸ್ತಿ ಹೆಸರಿನಲ್ಲಿ ಸರ್ವೆ ಮಾಡಿ ನಮ್ಮಿಂದ ಬೇಸಾಯ ಭೂಮಿ ಕಿತ್ತುಕೊಳ್ಳುವ ಉನ್ನಾರ ನಡೆಯುತ್ತಿದೆ ಎಂದು ಜಮೀನು ಮಾಲೀಕ ರತ್ನಮ್ಮ ಮುನಿಯಪ್ಪ ಅವ್ರು ಆರೋಪಿಸಿದರು.
ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿ ಸ್ವಾಮಿಗಳ ಗೊಲ್ಲಹಳ್ಳಿ ಗ್ರಾಮದ ಸರ್ವೇ ನಂ. 75/2 1ಎಕರೆ 8ಗುಂಟೆ ಜಮೀನು ವಿಚಾರವಾಗಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಮೀನು ಸೇರಿದಂತೆ ಸರ್ವೇ ನಂ 76, 77, 78 ಜಮೀನುಗಳನ್ನು ಕಬಳಿಸಲು ಕಿಡಿಗೇಡಿಗಳು ಮುಂದಾಗಿದ್ದು, ತಹಶೀಲ್ದಾರ್ ಸಹ ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಚೆನ್ನೈ ಕಾರಿಡಾರ್ ಕಾಮಗಾರಿಗಾಗಿ ನಮ್ಮ ಜಮೀನನ್ನು ಕಳೆದುಕೊಂಡು ಅದರಲ್ಲಿ ಬಂದ ಹಣದಿಂದ ಕೋಲಾರ ನಗರದ ಕಠಾರಿ ಪಾಳ್ಯ ನಿವಾಸಿ ಸಿರಾಜ್ ಎಂಬುವರ ಬಳಿ ಲಕ್ಷ್ಮಿ ಸಾಗರ ಗ್ರಾಮದ ಸರ್ವೇ ನಂ 75/2 ಭೂಮಿಯನ್ನು ಕೊಂಡುಕೊಂಡಿದ್ದೇನೆ.
ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಸರಿ ಮಾಡಿ ಕೃಷಿ ಭೂಮಿಯಾಗಿ ಪರಿವರ್ತಿಸಿದ್ದು, ಟ್ರಾನ್ಸ್ ಫಾರ್ಮರ್, ಕೃಷಿ ಹೊಂಡ ನಿರ್ಮಿಸಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಈಗ ಕೆಲವು ಕಿಡಿಗೇಡಿಗಳಿಂದ ಜಮೀನು ಪೋಡಿ ದುರಸ್ತಿ ಹೆಸರಿನಲ್ಲಿ ಸರ್ವೇ ಮಾಡಿ ನಮ್ಮಿಂದ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ತಿಳಿಸಿದ್ರು.
ತಹಶೀಲ್ದಾರ್ ಇದರ ಬಗ್ಗೆ ವಿಚಾರ ಮಾಡದೇ ಸರ್ವೇ ಮಾಡಲು ಮುಂದಾಗಿದ್ದಾರೆ ಜಮೀನು ಮಾಲೀಕರಿಗೆ ಸೂಚನೆ ಪತ್ರ ಸಹ ನೀಡಿದ್ದಾರೆ. ಕುಲಂಕುಶವಾಗಿ ವಿಚಾರ ಮಾಡಿ ಭೂಮಿಯನ್ನು ರಕ್ಷಿಸಿ ನಮಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಕುಟುಂಬ ಸಮೇತ ವಿಷ ಕುಡಿದು ನಾವು ಇದೇ ಭೂಮಿಯಲ್ಲಿ ಸಾಯುತ್ತೇವೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296