ಐಜ್ವಾಲ್: ಸೋಮವಾರ ಐಜ್ವಾಲ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಕೈಗೊಂಡಾಗ ಅಪಾರ ಜನಸ್ತೋಮ ಸ್ವಾಗತಿಸಿತು. ಚುನಾವಣಾ ಕಣದಲ್ಲಿರುವ ಮಿಜೋರಾಂನ ರಾಜಧಾನಿಯನ್ನು ತಲುಪಿದ ನಂತರ ಅವರು ಚನ್ಮಾರಿ ಜಂಕ್ಷನ್‌ನಿಂದ ಮೆರವಣಿಗೆಯನ್ನು ಪ್ರಾರಂಭಿಸಿದರು ಮತ್ತು ಕಾಂಗ್ರೆಸ್ ಬೆಂಬಲಿಗರು ಪಕ್ಷದ ಧ್ವಜಗಳನ್ನು ಬೀಸುವ ನಡುವೆ ನಗರದ ಅಂಕುಡೊಂಕಾದ ರಸ್ತೆಗಳಲ್ಲಿ ನಡೆದರು.
ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿದ್ದ ಜನರತ್ತ ಕೈಬೀಸಿ, ಪಾದಯಾತ್ರೆಯ ವೇಳೆ ತಮ್ಮನ್ನು ಭೇಟಿಯಾಗಲು ಬಂದವರ ಜತೆ ಕೈಕುಲುಕಿ ಸಂವಾದ ನಡೆಸಿದರು. ಕೆಲವರು ಕಾಂಗ್ರೆಸ್ ಮುಖಂಡರೊಂದಿಗೆ ಸೆಲ್ಫಿ ತೆಗೆದುಕೊಂಡರು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯಗಳನ್ನು ಸಹ ಪ್ರದರ್ಶಿಸಲಾಯಿತು. 40 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.


