ತುಮಕೂರು: ಎಂಜಿನಿಯರಿಂಗ್ ಉದ್ಯೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ದೊಡ್ಡಕೆರೆಯಲ್ಲಿ ನಡೆದಿದ್ದು, ಶೋಧ ಕಾರ್ಯಕ್ಕೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಸಹ ಅಗ್ನಿಶಾಮಕ ಸಿಬ್ಬಂದಿಗೆ ಸಾಥ್ ನೀಡಿದರು.
ಖುದ್ದು ಅಗ್ನಿಶಾಮಕ ದಳದೊಂದಿಗೆ ಕೆರೆಗೆ ಇಳಿದ ಶಾಸಕ ರಂಗನಾಥ್ ಲೈಫ್ ಜಾಕೆಟ್ ಧರಿಸಿ ಯುವತಿಯ ಶವಕ್ಕಾಗಿ ಶೋಧ ನಡೆಸಿದರು.
ಸುಮಾ, ಕಣ್ಮರೆಯಾಗಿರುವ ಎಂಜಿನಿಯರ ಆಗಿದ್ದಾರೆ. ಕುಣಿಗಲ್ ತಾಲ್ಲೂಕು ಸೊಬಗಾನಹಳ್ಳಿ ಗ್ರಾಮದ ನಿವಾಸಿ ಆಗಿದ್ದು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.
ನಿನ್ನೆ ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಿರುವ ಸುಮ, ಕುಣಿಗಲ್ ದೊಡ್ಡಕೆರೆ ಬಳಿ ಸುಮಾಳ ಬ್ಯಾಗ್, ಮೊಬೈಲ್ ಬಸ್ ನಲ್ಲಿ ಪ್ರಯಾಣಿಸಿದ ಟಿಕೆಟ್ ಚಪ್ಪಲಿ ಪತ್ತೆಯಾಗಿತ್ತು.
ಕುಣಿಗಲ್ ದೊಡ್ಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4