ತುರುವೇಕೆರೆ: ಶಾಸಕರಾದ ಎಂ.ಟಿ. ಕೃಷ್ಣಪ್ಪನವರ 73ನೇ ಹುಟ್ಟುಹಬ್ಬವನ್ನು ಇಂದು ತಾಲೂಕಿನ ಗುತ್ತಿಗೆದಾರರು ಮತ್ತು ಕಾರ್ಯಕರ್ತರು ಬಹಳ ಅದ್ದೂರಿಯಾಗಿ ಆಚರಿಸಿದರು.
ನೂತನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ತನ್ನ ಹುಟ್ಟೂರಾದ ಮುತ್ಸಂದ್ರ ಗ್ರಾಮಕ್ಕೆ ತಮ್ಮ ಪರಿವಾರ ಸಮೇತರಾಗಿ ತೆರಳಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ, ನಂತರ ಪಟ್ಟಣದ ಅಧಿದೇವತೆಗಳಾದ ಉಡಸಲಮ್ಮ ದೇವಿ ಹಾಗೂ ಬೇಟರಾಯಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದರ್ಶನವನ್ನು ಪಡೆದು, ತಮ್ಮ ಸ್ವಗೃಹದ ಪಕ್ಕದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಗುತ್ತಿಗೆದಾರರ ಸಂಘದ ವತಿಯಿಂದ ಮಾಡಿಸಿದ್ದ ಬೃಹತ್ ಗಾತ್ರದ ಕೇಕನ್ನು ಕತ್ತರಿಸಿದರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತಿನಿಸಿದರು.
ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ಶಾಸಕರಿಗೆ ಶಾಲು, ಹಾರಗಳನ್ನು ಹಾಕಿ ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿ, ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಾನು ತುರುವೇಕೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದೇನೆ. ಕಳೆದ ಒಂದು ಬಾರಿ ಬಹಳ ಕಡಿಮೆ ಅಂತರದಿಂದ ಪರಾಜಿತನಾಗಿದ್ದೆ, ಆದರೆ ಈ ಬಾರಿ ನನಗೆ ಅತಿಹೆಚ್ಚಿನ ಮತಗಳನ್ನು ಕೊಟ್ಟು ನನ್ನ ಗೆಲುವಿಗೆ ಕಾರಣರಾಗಿದ್ದೀರಾ, ಇದು ನನ್ನ ಗೆಲುವಲ್ಲ ಇದು ನಿಮ್ಮ ಗೆಲುವು, ಹಾಗಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಅಭಿವೃದ್ಧಿಯನ್ನು ಮಾಡುವುದೇ ನನ್ನ ಗುರಿಯಾಗಿದೆ ಎಂದರು .
ನಮ್ಮ ತಾಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಈ ಬಾರಿ ಅತಿ ಹೆಚ್ಚಿನ ಮತವನ್ನು ಕೊಟ್ಟು ನನ್ನ ಗೆಲುವಿಗೆ ನೀವು ಕೂಡ ಪಾತ್ರರಾಗಿದ್ದು, ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳನ್ನ ಅರ್ಪಿಸುತ್ತೇನೆ ತಾಲೂಕಿನ ಎಲ್ಲಾ ಹೋಬಳಿಯ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸಿ ಹಗಲು ರಾತ್ರಿ ಎನ್ನದೆ ನನ್ನ ಗೆಲುವಿಗೆ ನೀವು ಕೂಡ ಕಾರಣರಾಗಿದ್ದೀರಾ, ನಿಮಗೂ ಕೂಡ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಜೊತೆಗೆ ಈ ನನ್ನ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳಬೇಕೆಂದು ಕೊಂಡಿದ್ದೆ ಆದರೆ ನಮ್ಮ ತಾಲೂಕಿನ ಗುತ್ತಿಗೆದಾರ ಮಿತ್ರರು ಹಾಗೂ ಕಾರ್ಯಕರ್ತರು ಈ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಅವರಿಗೂ ಕೂಡ ನನ್ನ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಗುತ್ತಿಗೆದಾರರು ಹಾಜರಿದ್ದು ಶಾಸಕರ ಹುಟ್ಟುಹಬ್ಬವನ್ನು ಬಹಳ ಸಂತೋಷವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ನ ತಾಲೂಕು ಘಟಕದ ಅಧ್ಯಕ್ಷರಾದ ದೊಡ್ಡೇಗೌಡ, ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ದೇವರಾಜು, ವೆಂಕಟಾಪುರ ಯೋಗೀಶ್, ಕಲ್ಲಬೋರನಹಳ್ಳಿ ಜಯರಾಮಯ್ಯ, ಲೋಕೇಶ್ ಬಾಬು, ತಾವರೆಕೆರೆ ಕೆಂಪೇಗೌಡ, ಸೂರವನಹಳ್ಳಿ ಸ್ವಾಮಿ ಹಾಗೂ ಹಲವಾರು ಗುತ್ತಿಗೆದಾರರು ಮತ್ತು ಕಾರ್ಯಕರ್ತರು ಈ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
admin