ಕ್ರೀಡಾ ಸುದ್ಧಿ: ಕ್ರಿಕೆಟ್
ಬ್ರಿಸ್ಬೇನ್ ‘ನಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್’ಗಳ ಭರ್ಜರಿ ಜಯದಾಖಲಿಸಿದೆ.
ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0ಯ ಮುನ್ನಡೆಯಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್’ನಲ್ಲಿ 147 ರನ್’ಗಳಿಗೆ ಆಲೌಟ್ ಆಯಿತು.ಅಲ್ಪ ಮೊತ್ತದ ಟ್ರಯಲ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್’ನಲ್ಲಿ 425 ಕ್ಕೆ ಸರ್ವ ಪತನ ಕಂಡು 278 ರನ್ಗಳ ಮುನ್ನಡೆ ಪಡೆಯಿತು.
278 ರನ್’ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ನಥಾನ್ ಲಯಾನ್ ( 91ಕ್ಕೆ 4 ) ಮತ್ತು ಆಸ್ಟ್ರೇಲಿಯಾ ತಂಡದ ಇತರರ ಬೌಲಿಂಗ್ ದಾಳಿಗೆ ಸಿಲುಕಿ 297 ಕ್ಕೆ ಸರ್ವ ಪತನ ಕಂಡಿತು.
ಕೇವಲ 20 ರನ್’ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದು ಕೊಂಡು ಗುರಿ ತಲುಪಿ ಭರ್ಜರಿ ಜಯದ ನಗೆ ಬೀರಿತು.
ಮೊದಲ ಇನ್ನಿಂಗ್ಸ್’ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಟ್ರೆವಿಸ್ ಹೆಡ್ 152(148) ರವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ದೊರೆಯಿತು.
ಆಶಸ್ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 16ರಿಂದ ಅಡಿಲೇಡ್’ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 147/10
ಜೋಸ್ ಬಟ್ಲರ್ 39(58)
ಪ್ಯಾಟ್ ಕಮಿನ್ಸ್ 38ಕ್ಕೆ5
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 425/10
ಟ್ರೆವಿಸ್ ಹೆಡ್ 152(148)
ರಾಬಿನ್ಸನ್ 58ಕ್ಕೆ 3
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 297/10
ಜೊ ರೂಟ್ 89(165)
ನಾಥನ್ ಲಯನ್ 91ಕ್ಕೆ 4
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 20/1
ಕೆರ್ರಿ 9
ಮಾರ್ಕಸ್ 9*
ರಾಬಿನ್ಸನ್ 13ಕ್ಕೆ1
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ