ತುಮಕೂರು: ಸಂಸದನಾಗಿ ಆಯ್ಕೆ ಆದ ಮೂರು ದಿನದ ನಂತರ ನಾನು ದೆಹಲಿಗೆ ಹೋದಾಗ ಬಿ.ಎಲ್. ಸಂತೋಷ್ ಅವರು ʼಹೋಗಿ ಪ್ರಧಾನಿಗೆ ವಿಶ್ ಮಾಡಿ ಅಂದರುʼ, ನಾನು ಹೋಗಿ ಪ್ರಧಾನಿ ಮೋದಿ ಅವರಿಗೆ ವಿಶ್ ಮಾಡಿದೆ. ಪ್ರಧಾನಿ ಮೋದಿ ಅವರು ನನ್ನ ತಬ್ಬಿ ಡಬಲ್ ಕಂಗ್ರಾಜುಲೆಷನ್ ಅಂದರು. ಆಗಲೇ ಗೊತ್ತಾಗಿದ್ದು ನಾನು ಕೇಂದ್ರ ಸಚಿವನಾಗುತ್ತೇನೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದ ಸವಲತ್ತು ವಿತರಣೆ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಆಗ ಅಲ್ಲಿಯೇ ಇದ್ದ ಸಂತೋಷ ಹೇಳಿದರು ʼ ಹೋಗಿ ನಿಮಗೆ ಲಾಟರಿ ಹೊಡಿತು ಅಂದರುʼ ಅದಾದ ಕೆಲವೇ ಗಂಟೆಯಲ್ಲಿ ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ ಎಂದು ಹೇಳಿದರು.
ನಾನು ಸುಮಾರು 1.80 ಲಕ್ಷ ಮತದಿಂದ ಗೆದ್ದಿದ್ದೇನೆ, ತುರುವೇಕೆರೆ ತಾಲ್ಲೂಕಿನ ಜನ 50 ಸಾವಿರ ಲೀಡ್ ಕೊಟ್ಟಿದ್ದಾರೆ. ಅವರ ಪಾದ ಹಿಡಿದು ನಾನು ನಮಸ್ಕಾರ ಮಾಡಬೇಕು ಎಂದರು.
ಒಟ್ಟಾರೆ ಬಿ.ಎಲ್.ಸಂತೋಷ ಅವರ ಬೆಂಬಲದಿಂದಲೇ ಕೇಂದ್ರ ಸಚಿವನಾದೆ ಎಂದು ಪರೋಕ್ಷವಾಗಿ ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4