ಮಧುಗಿರಿ: ಸದಾ ಸಮುದಾಯದ ಅಭಿವೃದ್ಧಿಗಾಗಿ ಸದಾ ಮಂದಿರುವೆ ಹಾಗೂ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನವನ್ನು ಕಟ್ಟಿಸಿಕೊಡಲಾಗುವುದು ಎಂದು ಕೇಂದ್ರ ಜಲ ಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಭರವಸೆ ನೀಡಿದರು.
ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದು ಇತಿಹಾಸವುಳ್ಳ ಸಮಾಜ ವಾಗಿದ್ದು, ಸಮಾಜದಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಂಡು ಒಂದೇ ನಾಣ್ಯದ ಎರಡು ಮುಖಗಳಾಗಿ ಸಮಾಜ ಬೆಳೆಯಬೇಕಾಗಿದೆ. ಸಮಾಜದ ಅಭಿವೃದ್ಧಿಗಾಗಿ ಸದಾ ಬದ್ಧವಾಗಿರುವೆ ಶೀಘ್ರದಲ್ಲೇ ಸಮುದಾಯ ಭವನವನ್ನು ಕಟ್ಟಿಕೊಡಲಾಗುವುದು ಎಂದು ಹೇಳಿದರು.
ಮೋದಿ ದೇಶದ ಭವಿಷ್ಯದ ಆಸ್ತಿ ಎಲ್ಲಾ ವರ್ಗದವರನ್ನು ಸಮಾನವಾಗಿ ನೋಡುವಂತಹ ಮಹಾನ್ ವ್ಯಕ್ತಿ, ಮೋದಿಯವರ ಕಾಳಜಿಯಿಂದ 10,000 ವೈದ್ಯಕೀಯ ಸೀಟುಗಳು ಈ ವರ್ಷದಲ್ಲೇ ಹೆಚ್ಚುವರಿ ಆಗಲಿದೆ ಇದರಿಂದ ಬಡವರಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ದೊಡ್ಡ ಸವಾಲಾಗಿದ್ದು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗಾಗಿ ಸ್ವಂತ ಮನೆ ಹೊಲಗಳನ್ನೇ ಮಾರಾಟ ಅಥವಾ ಗಿರವಿ ಇಡುತ್ತಿದ್ದಾರೆ ಇನ್ನು ಮುಂದೆ ಪೋಷಕರು ಹೆದರುವ ಅವಶ್ಯಕತೆ ಇಲ್ಲ ಸಮಾಜದ ಅಭಿವೃದ್ಧಿಗಾಗಿ ಸದಾ ಮುಂದಿರುವೆನು,
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳಿಂದ ಸಮಾಜಕ್ಕೆ ಹೊಸ ಚೈತನ್ಯ ಬಂದಿದೆ ಸ್ವಾಮೀಜಿ ಎಲ್ಲಾ ಧರ್ಮದವರನ್ನು ಒಂದೇ ಛತ್ರಿಯ ಅಡಿಯಲ್ಲಿ ಸೇರಿಸುವಂತಹ ಕೆಲಸ ಮಾಡುತ್ತಿದ್ದಾರೆ ಸಮುದಾಯಗಳಲ್ಲಿ ಸುಖ ಶಾಂತಿ ನೆಮ್ಮದಿ ಕಾಣಲು ಸ್ವಾಮೀಜಿ ರವರ ಕೊಡುಗೆಗಳು ಅಪಾರವಾಗಿವೆ ಎಂದು ಹೇಳಿದರು.
ಮೋದಿ ದೇಶದ ಭವಿಷ್ಯದ ಆಸ್ತಿ ಎಲ್ಲಾ ವರ್ಗದವರನ್ನು ಸಮಾನವಾಗಿ ನೋಡುವಂತಹ ಮಹಾನ್ ವ್ಯಕ್ತಿ, ಮೋದಿಯವರ ಕಾಳಜಿಯಿಂದ 10,000 ವೈದ್ಯಕೀಯ ಸೀಟುಗಳು ಈ ವರ್ಷದಲ್ಲೇ ಹೆಚ್ಚುವರಿ ಆಗಲಿದೆ ಇದರಿಂದ ಬಡವರಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಮಲ್ಲಿಕಾರ್ಜುನ್ ರವರು ಮಾತನಾಡಿ ರಾಜಣ್ಣರವರು ವೀರಶೈವ ಲಿಂಗಾಯಿತ ಸಮಾಜದ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮುದಾಯದಿಂದ ಬಂದಿರುವ 20 ಅರ್ಜಿಗಳ ಪೈಕಿ 15 ಅರ್ಜಿಗಳನ್ನು ರಾಜಣ್ಣ ರವರು ಪರಿಗಣಿಸಿ ಮಂಜೂರು ಮಾಡಿಸಿದ್ದಾರೆ ಎಂದು ಹೇಳಿದರು.
ಮಧುಗಿರಿ ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ ತಾಲೂಕಿನ ಪ್ರತಿ ಹಳ್ಳಿಯಲ್ಲೂ ನಮ್ಮ ಸಮಾಜದ ಬಡ ಕುಟುಂಬಗಳು ವಾಸಿಸುತ್ತಿದ್ದು ಈ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ, ಸಚಿವ ಸೋಮಣ್ಣ ರವರು ಸರಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಿತವಚನ ನುಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮಂಜುನಾಥ್, ಗುತ್ತಿಗೆದಾರರಾದ ಎಮ್ ಶಿವಾನಂದ್, ಎಸ್ ರೇಣುಕಾ ಪ್ರಸಾದ್, ಮಿಡಿಗೇಶಿ ಗ್ರಾಪಂ ಸದಸ್ಯೆ ಸುಕನ್ಯಾ ವಿಜಯ್ ಕುಮಾರ್, ಸಂಘದ ಉಪಾಧ್ಯಕ್ಷ ಎಂ ವಿ ರುದ್ರರಾಧ್ಯ, ಸರಕಾರಿ ನೌಕರರ ಸಂಘದ ಖಜಾಂಚಿ ನಟರಾಜ್ ಹಾಗೂ ಇತರರು ಇದ್ದರು.
ವರದಿ: ಅಬೀದ್, ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC