ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜೈಪುರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮೋದಿಯನ್ನು ಸೋಲಿಸುವುದೇ ನಿಮ್ಮ ಗುರಿಯಾಗಿದ್ದರೆ, ಮೋದಿಯನ್ನು ಎಂದಿಗೂ ಪ್ರಧಾನಿಯನ್ನಾಗಿ ಮಾಡಬಾರದು ಎಂಬುದು ನನ್ನ ಗುರಿ, ನೀವು ಎಂದಾದರೂ ಬಿಜೆಪಿಗೆ ಮತ ಹಾಕಿದ್ದೀರಾ ಎಂಬ ನನ್ನ ಪ್ರಶ್ನೆಗೆ, ಮತ ಹಾಕಿಲ್ಲ ಎಂಬ ಉತ್ತರ ನಿಮ್ಮದಾಗಿದ್ದರೆ, ಇಷ್ಟು ವರ್ಷ ಬಿಜೆಪಿ ಹೇಗೆ ಗೆದ್ದಿತು? ಎಂದು ಕೇಳಿದ್ದಾರೆ.


