ಬೆಂಗಳೂರು: “ವಿಧಾನಸಭೆ ಚುನಾವಣೆಗಿಂತಲೂ ಹೆಚ್ಚು ಸೀಟು ಲೋಕಸಭೆ ಚುನಾವಣೆಯಲ್ಲಿ ಸಿಗಲಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು 136 ಸೀಟು ಗೆದ್ದಿದ್ದೇವೆ. ದೇಶದಲ್ಲೇ ಅತಿ ಬಲಿಷ್ಠ ಎಂದರೆ ಕರ್ನಾಟಕವಾಗಿದೆ. ಹೀಗಾಗಿ ಅಸೆಂಬ್ಲಿಯಲ್ಲಿ ಎಷ್ಟು ಗೆದ್ದಿದ್ದೇವೊ ಅದಕ್ಕಿಂತಲೂ ಹೆಚ್ಚು ಪಾರ್ಲಿಮೆಂಟ್ ನಲ್ಲಿ ಗೆಲ್ಲುತ್ತೇವೆ ಎಂದರು.
ನಾವು ಈ ಬಾರಿ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಯುವಕರಿಗೆ, ವಿದ್ಯಾವಂತರಿಗೆ, ಕೆಲಸ ಮಾಡುವವರಿಗೆ ಟಿಕೆಟ್ ನೀಡಿದ್ದೇವೆ. ಇಡೀ ಪಕ್ಷ ನಮ್ಮ ಅಭ್ಯರ್ಥಿಯ ಪರ ಕೆಲಸ ಮಾಡುತ್ತೇವೆ. 3 ಲಕ್ಷ ಅಂತರದಿಂದ ಅಭ್ಯರ್ಥಿ ಗೆಲ್ಲುತ್ತಾರೆ. ನಮ್ಮಲ್ಲಿ ಎಲ್ಲೂ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸೇರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ” ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


