ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೋಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದ ಸರ್ವೆ.ನಂ.99ರ ಅರಣ್ಯ ನಾಶ ಮಾಡಲಾಗುತ್ತಿದ್ದು, ತೋಗರಿಘಟ್ಟ ಗ್ರಾಮದ ಸ.ನಂ.99ರ 2ಎಕರೇ ಪ್ರದೇಶದಲ್ಲಿನ 400ಕ್ಕೂ ಅಧಿಕ ವಿವಿಧ ಜಾತಿಯ ಮರಗಳ ಮಾರಣಹೋಮ ಮಾಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ವಸತಿ ರಹಿತ ಸಾರ್ವಜನಿಕರಿಗೆ ವಸತಿ ನೀಡುವ ಉದ್ದೇಶಕ್ಕಾಗಿ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾಮಾಜಿಕ ವಲಯ ಅರಣ್ಯಕ್ಕೆ ಸೇರಿದ 400ಕ್ಕೂ ಅಧಿಕ ಮರಗಳ ಮಾರಣಹೋಮ ಮಾಡಲಾಗುತ್ತಿದೆ.
ತುಮಕೂರು ನಗರದ ಮೋಹಮ್ಮದ್ ಆಜಾಂಗೆ ತುಮಕೂರು ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 6ಲಕ್ಷ 25ಸಾವಿರಕ್ಕೆ 390ಮರಗಳಿಗೆ ಇ–ಹರಾಜು ನೀಡಲಾಗಿದೆ.
ಕಂದಾಯ ಇಲಾಖೆಯಿಂದ ಆಶ್ರಯ ಯೋಜನೆಗಾಗಿ ತೋಗರಿಘಟ್ಟ ಗ್ರಾಮದ ಸರ್ವೆ.ನಂ.ನಲ್ಲಿ 2ಎಕರೇ ಜಮೀನು ಮಂಜೂರು ಮಾಡಿ ಬೋಮ್ಮಲದೇವಿಪುರ ಗ್ರಾಪಂಗೆ ಹಸ್ತಾಂತರ ಮಾಡಲಾಗಿದ್ದು.. ಸರಕಾರಿ ಗೋಮಾಳದಲ್ಲಿ ಸಾಮಾಜಿ ವಲಯ ಅರಣ್ಯ ಇಲಾಖೆಯಿಂದ ಬೆಳೆಸಿರುವ ವಿವಿಧ ಜಾತಿಯ ಮರಗಳನ್ನು ಮರೇಮಾಚಿ ಬಿ.ಡಿ.ಪುರ ಗ್ರಾಪಂಯಿಂದ ಹರಾಜಿಗೆ ಮಸಲತ್ತು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಸಾಮಾಜಿಕ ವಲಯ ಅರಣ್ಯ ಇಲಾಖೆಯ ಅನುಧಾನದಿಂದ ಕಳೆದ 30 ವರ್ಷದಿಂದ ಕಷ್ಟಪಟ್ಟು ಬೆಳೆಸಿರುವ ನೂರಾರು ಜಾತಿಯ ಮರಗಳು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಬೋಮ್ಮಲದೇವಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಗೋಮಾಳ, ಸರಕಾರಿ ಬಿಳು ಮತ್ತು ಸರಕಾರಿ ಖರಾಬು ಇಲ್ಲವೇ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅರಣ್ಯದಿಂದ ನಾಡಿಗೆ ಬರುತ್ತಿರುವ ದೂರ ಪ್ರಾಣಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಉಳಿದಿರುವ ಅಲ್ಪಸ್ವಲ್ಪ ಅರಣ್ಯ ಪ್ರದೇಶಗಳನ್ನು ಹೀಗೆ ಹಾಳು ಮಾಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ಬಾರಿ ದೊಡ್ಡ ಅನಾಹುತ ಕಾದಿದೆ ಎನ್ನುತ್ತಾರೆ ಸ್ಥಳೀಯರು.
ಇದೇ ರೀತಿ ತಾಲೂಕಿನ ಹಲವು ಪಂಚಾಯ್ತಿಗಳ ವ್ಯಕ್ತಿಯಲ್ಲಿ ಅರಣ್ಯ ಪ್ರದೇಶಗಳನ್ನು ವಸತಿಗಳಿಗೆ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನಾದರೂ ಅಧಿಕಾರಿಗಳು ಎತ್ತುಕೊಂಡು ಅರಣ್ಯ ಪ್ರದೇಶಗಳನ್ನು ಉಳಿಸುವ ಕೆಲಸ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx