ತುಮಕೂರು: ರಾಜಕಾರಣದಲ್ಲಿ ಸಮಾಧಾನವಾಗಿದ್ರೆ ಏನಾದ್ರು ಸಾಧಿಸಬಹುದು. ಕಳೆದ ಬಾರಿನು ನಾನು ಹೇಳಿದ್ದೆ. ಮುದ್ದಹನುಮೇಗೌಡರು ಆತುರ ಬೀಳ್ತಿದ್ದಾರೆ ಅಂತ ಇನ್ನು ಸ್ವಲ್ಪ ಕಾಯಬಹುದಿತ್ತು ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
ನನಗೆ ಗೊತ್ತಿಲ್ಲ ಮುದ್ದಹನುಮೇಗೌಡರು ಯಾಕೆ ಈ ತೀರ್ಮಾನ ತಗೊಂಡ್ರು ಅಂತೇಳಿ, ಮುದ್ದಹನುಮೇಗೌಡರು ಎರಡು ಕಡೆ ಆ ಕಡೆ ಈ ಕಡೆ ಹಾಗಿದ್ದೋರು. ಇವತ್ತು ದಿಢೀರ್ ಅಂತ ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದಾರೆ ಎಂಬುದನ್ನ ಮಾಧ್ಯಮದಲ್ಲಿ ನೋಡ್ದೆ. ಸ್ಪಲ್ಪ ಅವರು ತೀರ್ಮಾನ ಆತುರದ್ದು ಆಯ್ತು ಅಂತ ನನ್ನ ಭಾವನೆ ಎಂದರು.
ಬಿಜೆಪಿಯಲ್ಲಿ ಇಲ್ಲಿ ಯಾರು ಏನ್ ಮಾತನಾಡ್ತಾರೆ ಅದು ಪ್ರಸ್ತುತ ಅಲ್ಲ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅವರು ಏನ್ ತೀರ್ಮಾನ ತಗೊಳ್ತಾರೋ ಅದೇ ಫೈನಲ್ ಎಂದರು.
ರಾಜ್ಯಸಭಾ ಅಭ್ಯರ್ಥಿಗಳನ್ನ ನಾವು ಯಾರು ನಿರೀಕ್ಷೆ ಮಾಡಿರಲಿಲ್ಲ. ಅವರು ಬೇರೆ ಬೇರೆ ಆಯಾಮದಲ್ಲಿ ಮಾಹಿತಿ ತರಿಸಿಕೊಂಡು ಅವಲೋಕನ ಮಾಡಿ, ಫೈನಲ್ ಆಗಿ ತೀರ್ಮಾನ ಮಾಡ್ತಾರೆ. ಅವರು ತೀರ್ಮಾನ ತಗೋಳೋವರೆಗೆ ನಾವು ಕಾಯಬೇಕಾಗುತ್ತೆ ಎಂದರು.
ಇಡೀ ರಾಷ್ಟ್ರದಲ್ಲಿ ಯಾರಿಗೂ ಇದುವರೆಗೆ ಬಿಜೆಪಿಯಲ್ಲಿ ಎಲ್ಲಿ ಸೀಟ್ ಕೊಡ್ತಾರೆ, ಯಾರಿಗೆ ಕೊಡ್ತಾರೆ ಅಂತ ಇವತ್ತಿನವರೆಗೂ ಗೊತ್ತಿಲ್ಲ. ಎಲ್ಲೂ ಕೂಡಾ ಒಂದೇ ಒಂದು ಶೀಟು ಸಹ ಬಹಿರಂಗ ಆಗಿಲ್ಲ ಎಂದರು.