ತಿಪಟೂರು: ಮನುಷ್ಯನಿಗೆ ಮುಕ್ತಿ ಮಾರ್ಗ ತೋರಿಸುವ ಮುಕ್ತಿಧಾಮದ ರಕ್ಷಣೆ ಎಲ್ಲರ ಹೊಣೆ ಎಂದು ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್ ಅಭಿಪ್ರಾಯಪಟ್ಟರು.
ತಿಪಟೂರು ಹೋರಾಟ ಸಮಿತಿ ಮತ್ತು ರೋಟರಿ ಬಳಗ ಹಾಗೂ ನಗರಸಭೆ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ನಗರದ ರುದ್ರಭೂಮಿಯಲ್ಲಿ ಹಮ್ಮಿಕೊಳ್ಳಲಾದ 11ನೇ ವರ್ಷದ ಸ್ವಚ್ಛತಾ ಕಾರ್ಯದ ಅಭಿಮಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಹಲೋಕ ತ್ಯಜಿಸುವ ಬಡವರ ಪಾಲಿಗೆ ಮುಕ್ತಿ ತೋರಿಸುವ ಮುಕ್ತಿ ರುದ್ರಭೂಮಿ 10 ಎಕರೆಗೂ ಎತ್ತು ಜಮೀನು ಹೊಂದಿದ್ದು , ಕೆಲವರು ಇದನ್ನು ಒತ್ತುವರಿ ಮಾಡಿಕೊಂಡಿದ್ದರು. ದಾಖಲೆಗಳಿದ್ದರೂ ಸಹ ಇದನ್ನು ಏನು ಮಾಡಲಿಕ್ಕೆ ಅಧಿಕಾರಿಗಳ ಕೈಯಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೋಟರಿ ಅಧ್ಯಕ್ಷ ವಿಜಯ ಕುಮಾರಿ, ನಗರ ಸಭೆ ಉಪಾಧ್ಯಕ್ಷರ ಸೊಪ್ಪು ಗಣೇಶ, ಎಪಿಎಂಸಿ ಮಾಜಿ ನಿರ್ದೇಶಕ ಟಿ.ಎಸ್.ಬಸವರಾಜ್, ರೋಟರಿ ಶಿವಶಂಕರ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy