nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉದ್ಧಟತನ ಕಲಿಸಿದ ಪಾಠ

    January 7, 2026

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026
    Facebook Twitter Instagram
    ಟ್ರೆಂಡಿಂಗ್
    • ಉದ್ಧಟತನ ಕಲಿಸಿದ ಪಾಠ
    • ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
    • ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 
    • ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ
    • ಕಲುಷಿತ ನೀರು, ಮಾಲಿನ್ಯ ದೂರಿಗೆ ಕಂಟ್ರೋಲ್ ರೂಮ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಬಂದಕುಂಟೆ ನಾಗರಾಜು: ಅಂಬೇಡ್ಕರ್ ಹೋರಾಟದ ರಥಕ್ಕೆ ತುಮಕೂರಿನಲ್ಲಿ ಸಾರಥ್ಯ ನೀಡಿದ ಮಹಾನ್ ಚೇತನ: ದಂಡಿನ ಶಿವರ ಕುಮಾರ್
    • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ: ಪ್ರೊ.ಕೆ.ಚಂದ್ರಣ್ಣ
    • ಹೆದ್ದಾರಿಯಲ್ಲಿನ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತ ಹೋರಾಟ: ಸಿದ್ದು ಬಾಲಗೊಂಡ
    ಜಿಲ್ಲಾ ಸುದ್ದಿ February 23, 2022

    ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತ ಹೋರಾಟ: ಸಿದ್ದು ಬಾಲಗೊಂಡ

    By adminFebruary 23, 2022No Comments2 Mins Read
    vijapura

    ವಿಜಾಪುರಜಿಲ್ಲೆ: ಕೊಲ್ಹಾರ ಪಟ್ಟಣ ಹಾಗೂ ಕೊಲ್ಹಾರ ತಾಲ್ಲೂಕು ವ್ಯಾಪ್ತಿಯ ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತವಾಗಿ ಹೋರಾಟ ಮಾಡಲಾಗುವುದು ಎಂದು ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ಬಾಲಗೊಂಡ ಹೇಳಿದರು.

    ಪಟ್ಟಣದಲ್ಲಿ ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಾಗಲಕೋಟೆ ನಂತರ ಎರಡನೆಯ ಅತಿ ದೊಡ್ಡ ಪಟ್ಟಣವಾದ ಕೊಲ್ಹಾರ ಪಟ್ಟಣ ಸ್ಥಳಾಂತರವಾಗಿ ಅನೇಕ ವರ್ಷಗಳು ಕಳೆಯುತ್ತಾ ಬಂದರು ಕೂಡ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಪುನರ್ವಸತಿ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ಸಂತ್ರಸ್ತರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಸರಕಾರಕ್ಕಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


    Provided by
    Provided by

    ಅಧಿಕಾರಿಗಳ ತಪ್ಪಿತಸ್ಥರು: ಪುನರ್ವಸತಿ ಅಧಿಕಾರಿಗಳು ತಪ್ಪು ಮಾಡಿ ಸುಖಾಸುಮ್ಮನೆ 1117 ಜನ ಸಂತ್ರಸ್ತರ ಮೇಲೆ ಪ್ರಕರಣದ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮಗೆ ಪುನರ್ವಸತಿ ಅಧಿಕಾರಿಗಳು ನೀಡಿದ ನಿವೇಶನಗಳು ಬೇಡ! ಅವರು ನೀಡಿರುವ 22 ಸಾವಿರ ಪರಿಹಾರವೂ ಬೇಡ ನಾವು ಮರಳಿ ನೀಡುತ್ತೇವೆ ನಮಗೆ ಹಳೆ ಕೊಲ್ಹಾರ ಮುಳುಗಡೆಯ ನಮ್ಮ ಮೂಲ ಜಾಗ ನೀಡಿ ಸಾಕು. ಇಲ್ಲದಿದ್ದಲ್ಲಿ ಶೀಘ್ರದಲ್ಲಿಯೇ ಮುಳುಗಡೆ ಹಳೆ ಕೊಲ್ಹಾರ ಗ್ರಾಮಕ್ಕೆ ಹೋಗಿ ವಾಸ್ತವ್ಯ ಹೂಡುತ್ತೆವೆ ಇದರ ಪರಿಣಾಮ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

    ಅಧಿಕಾರಿಗಳು ಈಗಾಗಲೇ ಮನೆಮನೆಗೆ ತೆರಳಿ ಸಂತ್ರಸ್ತರ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಸಂಶಯ ಬಂದವರಿಗೆ ನೋಟಿಸ್ ಕಳುಹಿಸಿ ಮಾಹಿತಿ ಪಡೆದುಕೊಂಡು ತಪ್ಪು ಮಾಹಿತಿ ನೀಡಿರುವವರ ನಿವೇಶನಗಳನ್ನು ರದ್ದುಪಡಿಸಬಹುದಿತ್ತು ಅಥವಾ ಡಿ.ಡಿ.ಭರಣ ಮಾಡಿಕೊಂಡು ಸಕ್ರಮಗೊಳಿಸಬಹುದಿತ್ತು ಎಂದರು.

    ಸರಕಾರಕ್ಕಾಗಿ ನಾವು ಮಾಡಿರುವ ತ್ಯಾಗ ಸಾಕಷ್ಟಿದೆ ಸರ್ವಸ್ವವನ್ನೂ ತ್ಯಾಗ ಮಾಡಿ ನಾವು ತಬ್ಬಲಿಗಳಾಗಿದ್ದೇವೆ. ಇಂತಹ ನಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಪುನರ್ವಸತಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಪುನರ್ವಸತಿ ವ್ಯಾಪ್ತಿಯ ಬಾಗಲಕೋಟೆಗೆ ಪಟ್ಟಣಕ್ಕೆ ಹೋಲಿಸಿದಲ್ಲಿ ಕೊಲ್ಹಾರ ಪಟ್ಟಣ ಅಭಿವೃದ್ಧಿಯಿಂದ ಬಹಳ ವಂಚಿತವಾಗಿದೆ. ಪಟ್ಟಣದಲ್ಲಿ ಸಮರ್ಪಕವಾದ ರಸ್ತೆಗಳ ವ್ಯವಸ್ಥೆ ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ವ್ಯಾಪಾರಸ್ಥರಿಗೆ ವಾಣಿಜ್ಯ ಸಂಕೀರ್ಣಿ ಇಲ್ಲ, ತಳಪಾಯ ಇಲ್ಲದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಕಟ್ಟಲು ನೀಡಿದ್ದ 22 ಸಾವೀರ  ರೂಪಾಯಿಗಳು ತಳಪಾಯಕ್ಕೆ ಸಾಕಾಗಿಲ್ಲ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಉದ್ಯಾನಗಳ ವ್ಯವಸ್ಥೆ ಇಲ್ಲ ಇಷ್ಟೇಲ್ಲ ಕೊರತೆಗಳ ನಡುವೆ ನಾವುಗಳು ಬದುಕು ಸವೆಸುತ್ತಿದ್ದೆವೆ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಸಂತ್ರಸ್ತರನ್ನು ಬಲಿಪಶು ಮಾಡುತ್ತಿದ್ದಾರೆ ಕೂಡಲೇ ಸಂತ್ರಸ್ತರ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ಹಿಂಪಡೆದುಕೊಂಡು ಸಂತ್ರಸ್ತರ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಕೊಲ್ಹಾರ ಮುಳುಗಡೆ ಸಂತ್ರಸ್ತರು ಹಾಗೂ ಸುತ್ತಮುತ್ತಲಿನ ಮುಳುಗಡೆಯಾದ ಗ್ರಾಮಗಳ ಸಂತ್ರಸ್ತರೊಂದಿಗೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದೆವೆ  ಎಂದು ಅವರು ಹೇಳಿದರು.

    ಬಸವರಾಜ ಕೊಠಾರಿ ಮಾತನಾಡುತ್ತಾ ಹಳೆ ಕೊಲ್ಹಾರ ವ್ಯಾಪ್ತಿಯಲ್ಲಿ ನಮ್ಮ ಅಂಗಡಿ ಮಳಿಗೆ ಇತ್ತು ನಮಗೆ ವಾಣಿಜ್ಯ  ನಿವೇಶನ ಹಂಚಿಕೆ ಮಾಡಬೇಕಾಗಿತ್ತು ಆದರೆ ಪುನರ್ವಸತಿ ಅಧಿಕಾರಿಗಳು ವಸತಿ ನಿವೇಶನಕ್ಕೆ ಡಿ.ಡಿ ತುಂಬಿರುವವರಿಗೆ ಮೊನ್ನೆಯಷ್ಟೇ ವಾಣಿಜ್ಯ ನಿವೇಶನ ಹಂಚಿಕೆ ಮಾಡಿ ಅಕ್ರಮವ್ಯಸಗಿದ್ದಾರೆ ಹೀಗಾದರೆ ಹೇಗೆ ಎಂದು ಅಳಲು ತೋಡಿಕೊಂಡರು.

    ಜಿ.ಎನ್.ಗಣಿ, ಸಿಂಧೂರ ಬ್ಯಾಲ್ಯಾಳ, ಅನ್ವರ ಕಂಕರಪೀರ, ಬಸಪ್ಪ ಕೊಠಾರಿ, ಅಲ್ಲಾಭಕ್ಷ ಬಿಜಾಪೂರ, ಶಿವಪ್ಪ ಬರಗಿ, ಮಲೀಕ ನದಾಫ, ಜಾವೀದ ಬಿಳಗಿ ಇತರರು ಇದ್ದರು.

    ವರದಿ: ಎ.ಎನ್. ಪೀರ್,  ತುಮಕೂರು


     

    admin
    • Website

    Related Posts

    ಹೊಳೆನರಸೀಪುರ ಕೆಎಸ್‌ ಆರ್‌ ಟಿಸಿ ಬಸ್ ನಿಲ್ದಾಣಕ್ಕೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಕುಮಾರ್ ಭೇಟಿ: ಅಧಿಕಾರಿಗಳಿಗೆ ತರಾಟೆ

    January 6, 2026

    ಪತ್ರಕರ್ತರ ಸಂಘ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    January 6, 2026

    ಕಾಂಗ್ರೆಸ್ ಮೈಸೂರು ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಡಗಲಪುರ ಗಂಗಾಧರ್ ಆಯ್ಕೆ

    January 6, 2026

    Leave A Reply Cancel Reply

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಉದ್ಧಟತನ ಕಲಿಸಿದ ಪಾಠ

    January 7, 2026

    ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ…

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026

    ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ

    January 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.