ರಾಜಧಾನಿಯಲ್ಲಿ ರೌಡಿಶೀಟರ್ ಸುಹೇಲ್ ಅಲಿಯಾಸ್ ಪಪ್ಪಾಯಿ ಎಂಬಾತನನ್ನು ಕೊಚ್ಚಿ ಹತ್ಯೆಮಾಡಲಾಗಿದೆ. ಡಿಜೆ ಹಳ್ಳಿ ಪೋಲಿಸ್ ಠಾಣೆ ರೌಡಿಶೀಟರ್ ಸುಹೇಲ್ ಪಪ್ಪಾಯಿ ಎಂಬಾತನ ಮೇಲೆ ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ಗುರುತು ಪತ್ತೆಯಾಗಬೇಕಿದೆ. ಗ್ಯಾಂಗ್ ವಾರ್ ಅಥವಾ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.


