ತುಮಕೂರು: ನಗರದಲ್ಲಿ ಸುಮಾರು 14 ಎಕರೆ ವಕ್ಫ್ ಆಸ್ತಿ ಖಾಲಿ ಇದೆ. ಅದರಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ, ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಆದಿ ಹೇಳಿದರು.
ರಾಜ್ಯ ಮುಸ್ಲಿಂ ಜಮಾಆತೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಯಾವುದೇ ಪ್ರತಿಭಾನ್ವಿತ ಮಗು, ಶುಲ್ಕದ ವಿಚಾರದಲ್ಲಿ ಉನ್ನತ ಶಿಕ್ಷಣದಿಂದ ವಂಚಿತವಾಗಬಾರದು. ಸಮುದಾಯದ ಸಮಗ್ರ ಅಭಿವೃದ್ದಿಯ ಕನಸು ಹೊತ್ತಿರುವ ರಾಜ್ಯ ವಕ್ಫ್ ಬೋರ್ಡ್, ಪ್ರಮುಖವಾಗಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು.
ವಕ್ಫ್ ಬೋರ್ಡ್‌ನಿಂದ ಬೆಂಗಳೂರಲ್ಲಿ ಅತ್ಯಾಧುನಿಕ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆರಂಭಿಸಿ ಐಎಎಸ್, ಐಪಿಎಸ್ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರೂ. 10 ಕೋಟಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಕಾರ್ಯದರ್ಶಿ ಆರೀಫ್ ರಾಜ, ಮುಖಂಡರಾದ ಎಸ್.ಷಫಿ ಅಹಮದ್, ಇಕ್ಬಾಲ್ ಅಹಮದ್, ಜಮಾಲ್, ಅಯಾಜ್ ಅಹಮದ್, ಸುಹೇಲ್, ಸೈಯದ್ ಶಹಬಾಜ್, ಫಯಾಜ್ ಮೊದಲಾದವರು ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700