ಮಂಡ್ಯ: ತಾಲ್ಲೂಕಿನ ಬಸರಾಳು ಹೋಬಳಿಯ ಮುತ್ತೇಗೆರೆ ಪಂಚಾಯತಿಯ ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮ ಪಂಚಾಯತ್ ಸದಸ್ಯರು ಶಿವಕುಮಾರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಂಚಾಯತ್ ನಲ್ಲಿ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ, ಹುನುಗನಹಳ್ಳಿ ಎಸ್ ಸಿ ಕಾಲೋನಿ ತೊಂಬೆ ಹಾಕಿ ಎರಡು ವರ್ಷ ಆದರು ನೀರೇ ಕಂಡಿಲ್ಲ. PDO ಇದ್ದರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎರಡು ವರ್ಷಗಳಾದರು ಬಿಲ್ ಕಲೆಕ್ಟರ್ ಮತ್ತು ಕಾರ್ಯದರ್ಶಿಗಳು ಇಲ್ಲದೆ ಪಂಚಾಯಿತಿ ಅವ್ಯವಸ್ಥೆಯಿಂದ ಕೂಡಿದೆ. ನಡವಳಿಕೆ ಪುಸ್ತಕದಲ್ಲಿ ಸಾಮಗ್ರಿ ಸೇರಿಸಿಲ್ಲ, ಬೀದಿ ದೀಪ ಖರೀದಿಯ ಬಿಲ್ ಇಲ್ಲ, ನಡುವಳಿ ಪುಸ್ತಕ ಹಾಗೂ ಬ್ಯಾಂಕ್ ಪಾಸ್ ಬುಕ್ ವ್ಯತ್ಯಾಸ ಕಂಡುಬಂದಿದೆ. ಆಡಳಿತ ಅಧಿಕಾರಿಗಳು ಅಧಿಕಾರ ಹಸ್ತಾಂತರ ಮಾಡುವಾಗ ಯಾವುದೇ ಬಾಕಿ ಮೊತ್ತ ತೋರಿಸುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪಂಚಾಯತ್ ನ ದಾಖಲಾತಿ ಅಂಶಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದರೆ, ಇಲ್ಲಿ ನಡೆಯುವ ಕರ್ಮಕಾಂಡಗಳು ಬಯಲಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದು, ತಪ್ಪಿತಸ್ಥರಿಗೆ ಕಾನೂನು ರೀತಿಯ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz