ಮಡಿಕೇರಿ: ಇಲ್ಲಿನ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿಯಲ್ಲಿ ಈಜಲು ಹೋದ ಮೂವರು ಪ್ರವಾಸಿಗರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರವಿವಾರ ನಡೆದಿದೆ.
ತೆಲಂಗಾಣದಿಂದ ಕೊಡಗಿಗೆ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರು ದುರಂತ ಅಂತ್ಯಕಂಡಿದ್ದು, ತೆಲಂಗಾಣದಿಂದ ಆಗಮಿಸಿದ್ದ ಈ ಪ್ರವಾಸಿಗರು ಕುಶಾಲನಗರದ ಹೋಂ ಸ್ಟೇಯಲ್ಲಿ ತಂಗಿದ್ದರು ಎನ್ನಲಾಗಿದೆ.
ಇಂದು ಕೋಟೆ ಅಬ್ಬಿಗೆ ಬಂದಿದ್ದ ಇವರು ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಮೂವರ ದೇಹವನ್ನು ನೀರಿನಿಂದ ಎತ್ತಿದ್ದಾರೆ. ಆದರೆ ಅದಾಗಲೇ ಮೂವರೂ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5