ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ. ಆತ ಆಕೆಯ ಹಿಂದೆ ಬಿದ್ದಿದ್ದ ಎಂದು ನೇಹಾಳ ತಾಯಿ ಗೀತಾ ಹಿರೇಮಠ ಹೇಳಿದ್ದಾರೆ. ಯಾರ ಕ್ಷಮೆ ಪಡೆದುಕೊಂಡು ಏನು ಮಾಡಲಿ. ನನ್ನ ಮಗಳು ವಾಪಸ್ಸು ಬರಲ್ಲವಲ್ಲ ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನನ್ನ ಮಗಳು ಬೋಲ್ಡ್ ಆಗಿದ್ದಳು. ಆದರೆ ನನ್ನ ಮಗಳು ಅಂಥವಳಲ್ಲ. ಒಂದೇ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಮದುವೆ ಕುರಿತು ಮಾತನಾಡಿಲ್ಲ ಆತ. ಈಗಿನ ತಂತ್ರಜ್ಞಾನದಲ್ಲಿ ಫೋಟೋ ಹೇಗೆ ಬೇಕಾದರೂ ಎಡಿಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ನನ್ನ ಮಗಳಿಗೆ ಶಾಂತಿ ಸಿಗಬೇಕಾದರೆ ಆತ ಸಾಯಬೇಕು.
ಆತನನ್ನು ಜೈಲಿನಲ್ಲಿಟ್ಟು ಏನು ಪ್ರಯೋಜನ? ಆತನನ್ನು ಜನರ ಕೈಗೆ ಕೊಡಿ. ಕಾಲೇಜಿಗೆ ಮೂರು ಗೇಟ್ ಇದೆ. ಯಾರು ಬರುತ್ತಾರೆ ಹೋಗುತ್ತಾರೆ? ಗೊತ್ತಿಲ್ಲ. ಈ ಘಟನೆ ನನ್ನ ಕಣ್ಣ ಮುಂದೆ ನಡೆಯಿತು. ಹತ್ತು ಹೆಜ್ಜೆ ದೂರ ಅಷ್ಟೇ ಇದ್ದೆ. ಕಲಿಯಲು ಕಳಿಸಿದರೆ ಹೆಣವಾಗಿ ಬರುತ್ತಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ ಎಂದು ನೇಹಾ ತಾಯಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


