nammatumakuru

    Subscribe to Updates

    Get the latest creative news from FooBar about art, design and business.

    What's Hot

    ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌

    July 26, 2026

    ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ

    July 26, 2026

    ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್

    July 26, 2026
    Facebook Twitter Instagram
    ಟ್ರೆಂಡಿಂಗ್
    • ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌
    • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
    • ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
    • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳ ಆಯ್ಕೆ: ಪಾರದರ್ಶಕ ಆಯ್ಕೆ ಪ್ರಕ್ರಿಯೆ
    • ಜುಲೈ 28ರಂದು ಭಾರತ–ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಾಗಾರ
    • ತಿಮ್ಮಮ್ಮನಹಳ್ಳಿ ಗುಂಪು ಘರ್ಷಣೆ: 7 ಮಂದಿ ಬಂಧನ
    • ಕಾಡಂಚಿನ ಗ್ರಾಮದ ಸಾಧಕ ಜಾಕಿ ಪ್ರತಾಪ್‌ ಗೆ ‘ಅಮ್ಮ ವಸುಂಧರೆ’ ಪ್ರಶಸ್ತಿ ಗೌರವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೈಸೂರು  ಜೈನ್ ಮಿಲನ್ ಜಿನ ಭಜನೆಗೆ ಹೊಸ ರೂಪ ನೀಡಿದೆ: ಅನಿತಾ ಸುರೇಂದ್ರಕುಮಾರ್
    ರಾಜ್ಯ ಸುದ್ದಿ December 23, 2024

    ಮೈಸೂರು  ಜೈನ್ ಮಿಲನ್ ಜಿನ ಭಜನೆಗೆ ಹೊಸ ರೂಪ ನೀಡಿದೆ: ಅನಿತಾ ಸುರೇಂದ್ರಕುಮಾರ್

    By adminDecember 23, 2024No Comments3 Mins Read
    jina

    ಮೈಸೂರು: ಭಾರತೀಯ ಜೈನ್ ಮಿಲನ್ ನ ಮೈಸೂರು  ಜೈನ್ ಮಿಲನ್  ಜಿನ ಭಜನೆಗೆ ಹೊಸ ರೂಪ ನೀಡಿದ್ದು, ಇದು ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ  ಶ್ರೀಗಳವರ ಕೊಡುಗೆ ಇದಾಗಿದೆ ಎಂದು ಭಾರತೀಯ ಜೈನ ಮಿಲನ್ ನ ರಾಶಿಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ  ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು.

    ಅವರಿಂದು ಭಾರತೀಯ ಜೈನ್  ಮಿಲನ್ ವಲಯ — 8 ರ ಮೈಸೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

    ನಮ್ಮ  ಜಿನಭಜನೆಗಳು,ಜೈನ ಸಂಸ್ಕಾರ ,ಸಂಸ್ಕೃತಿಯನ್ನು ಉಳಿಸುವಂತಹ ಕೆಲಸ ಮೈಸೂರು ಜೈನ ಮಿಲನ್ ಮಾಡುತ್ತಿದೆ, ಇದಕ್ಕೆ ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ ಶ್ರೀ ಗಳವರ ಕೊಡುಗೆ ಅವಿಸ್ಮರಣೆಯ, ಕಳೆದು ಬಾರಿ ಎಲ್ಲಾ ಜೈನ ಮಠಗಳಲ್ಲಿ ಜಿನಭಜನೆಗಳು  ನಡೆದಿದ್ದು, ಎಲ್ಲಾ ಭಟ್ಟಾರಕರು ಸಹಕಾರ ನೀಡಿದ್ದಾರೆ. ಇದರಿಂದ ಜನ ಖುಷಿ ಪಡುತ್ತಿದ್ದಾರೆ ಎಂದರು.  ಬಹುಮಾನಕ್ಕಾಗಿ ಹಾಡುವುದು ಬೇಡ, ಸ್ಪರ್ಧೆಗಾಗಿ ಹಾಡಿ ಎಂದವರು, ಈ ಹಾಡಿನಿಂದ  ಸ್ಪರ್ಧೆ ನೀಡಿ ಪುಣ್ಯ ಸಂಪಾದಿಸಿ ಎಂದರು.

    ಈ ಸ್ಪರ್ಧೆಯಲ್ಲಿ ತೀರ್ಪುಗಾರರ ಮಾತು ಅಂತಿಮವಾಗಿದ್ದು, ಇದರಲ್ಲಿ ಮಧ್ಯ ಪ್ರವೇಶವಿಲ್ಲ ಯಾವುದೇ ಕಲ್ಲಿಗೆ ಪೆಟ್ಟು ನೀಡಿದಾಗ ಅದೊಂದು ಶಿಲ್ಪವಾಗಿ ಹೊಸ ರೂಪ ತಾಳಲಿದೆ ಎಂದವರು , ಮೈಸೂರಿನ ವಿಭಾಗ ಮಟ್ಟದ ಜಿನಸಂಸ್ಕಾರ ಯಶಸ್ಸು ಕಂಡಿದ್ದು ,ಕಳೆದ ಎಂಟು ವರ್ಷಗಳಿಂದ ಬಹಳಷ್ಟು ಬದಲಾವಣೆ ಕಂಡಿದೆ . ನಮ್ಮ ಎಲ್ಲಾ ಕ್ಷೇತ್ರದಲ್ಲಿ   ಜೈನರೇ ಸಿಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದವರು.

    “ಸ್ವಯಂ ಭೂ ಸ್ತೋತ್ರ”.  ರೂಪಕದ ತಯಾರಿ ನಡೆದಿದ್ದು ,ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು .ಭಜನೆಯಲ್ಲಿ ರತ್ನಾಕರವರ್ಣಿ ಸತಕ ಕೇಳಿದರೆ ಭಜನೆಯ  ಸಾರಾ ತಿಳಿಯಲಿದೆ ಎಂದರು.

    ಭಾರತೀಯ ಜೈನ ಮಿಲನ್  ವಲಯ–8  ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಮಾತನಾಡಿ ಬೆಂಗಳೂರಿನ ಚಕ್ರೇಶ್ವರಿ ಮಹಿಳಾ ಸಮಾಜದ ಕಾರ್ಯಕ್ರಮ ಅನಿತಾ ಸುರೇಂದ್ರ ಕುಮಾರ್ ರವರಿಗೆ  ಪ್ರೇರಣೆಯಾಗಿ ಹೊಸ ತಿರುವ ನೀಡಿತು, ಯುವತಿಯರನ್ನ ಒಂದುಗೂಡಿಸಿ ಚಿಂತನೆ ಮಾಡಿ ಜಿನಭಜನೆಗೆ ಹೊಸ ರೂಪ ನೀಡಿದರು, 2016 ರಿಂದ ಈವರೆಗೆ ಒಂಬತ್ತು ಬಾರಿ ಕಾರ್ಯಕ್ರಮ ಮೂಡಿ ಬಂದಿದ್ದು, ರಾಜ್ಯದಾದ್ಯಂತ 350 ತಂಡ  ಗಳು ವಿಭಾಗ ಮಟ್ಟದಲ್ಲಿ ಪಾಲ್ಗೊಳ್ಳುತ್ತಿವೆ, ಈ ಕಾರ್ಯಕ್ರಮ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ ಎಂದರು.

    ಭಾರತೀಯ ಜೈನ್ ಮಿಲನ್ ವಲಯ ಎಂಟರ ಅಧ್ಯಕ್ಷರಾದ ಕೆ ಯುವರಾಜ್ ಭoಡಾರಿ ಮಾತನಾಡಿ ಜೈನ್ ಮಿಲನ್ ಹಾಗೂ ಜಿನ ಭಜನ ಸಂಬಂಧ ಉತ್ತಮವಾಗಿದೆ ಅನಿತಮ್ಮನವರ ಮಾರ್ಗದರ್ಶನದಲ್ಲಿ ಸಂಸ್ಕೃತಿ, ಸಂಸ್ಕಾರ ,ಸಂಪ್ರದಾಯಗಳ ಪಾಲನೆಗೆ ಜಿನ ಭಜನ ಕಾರ್ಯಕ್ರಮ ಮಾಡಿದ್ದಾರೆ, ಈಗ ಬಸದಿಗೆ ಬನ್ನಿ ಹೊಸ ಕಾರ್ಯಕ್ರಮ ಪ್ರಾರಂಭವಾಗಿದೆ ಸಮಾಜದ ಏಳಿಗೆ ಉಳಿವಿಗೆ ಈ ಕಾರ್ಯಕ್ರಮ ಮೂಡಿ ಬರುತ್ತಿದ್ದು ಸಂಘಟಿತರಾಗಿ ,ಸಮಾಜ ಬಲಪಡಿಸಬೇಕಿದೆ, ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಸುರೇಂದ್ರ ಹೆಗಡೆಯವರ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು.

    ತೀರ್ಪುಗಾರರಾದ ಜ್ಯೋತಿ ನೇಮಿರಾಜ್ ಲಿಂಗನ  ಮುಕ್ಕಿ ಮಾತನಾಡಿ ಅನಿತಮ್ಮನವರ ಚಿಂತನೆ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಿಂದ ಜಿನ ಧರ್ಮದ ,ಜಿನ ಭಜನೆಗಳು ಮನೆಮನೆಗೆ ತಲುಪುತ್ತಿದೆ ,ಇದರಿಂದ ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯವಾಗಿದ್ದು, ಇದು ಧರ್ಮ  ಪ್ರಭಾವನೆಗೂ ಸಹಕಾರಿಯಾಗಿದೆ ಎಂದರು.

    ಭಾರತೀಯ ಜೈ ನ್ ಮಿಲನ್ ವಲಯ — 8ರ ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಕಾರ್ಯಾಧ್ಯಕ್ಷ ರಾದ ಪದ್ಮಿನಿ ಪದ್ಮರಾಜ್,  ಮೈಸೂರಿನ ಜೈನ ಬ್ರಾಹ್ಮಣ ಸಮಾಜದ ಲಕ್ಷ್ಮೀರಮಣ, ರತ್ನತ್ರಯ ಧಾರವಾಹಿಯ ನಾಗೇಂದ್ರ ಕುಮಾರ್,  ಸ್ನೇಹ,  ಸೌಮ್ಯ ಶ್ರೀಧರ್ ಜೈನ, ಹಾಸನದ  ಶರ್ಮಿಳ ಜಿನೇಶ್, ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್.ನಾಗರಾಜ್, ಕಾರ್ಯದರ್ಶಿ , ಎಂ. ರತ್ನರಾಜು,  ಭಾರತೀಯ ಜೈನ್ ಮಿಲನ ರಾಷ್ಟ್ರೀಯ ವಿಭಾಗದ  ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್, ಜಿ.ಬಿ.ಚಂದ್ರಶೇಖರ್, ಇನ್ನಿತರ ಪದಾಧಿಕಾರಿಗಳು, ವಿವಿಧ ಜೈನ ಸಂಘಟನೆಗಳ ಅಧ್ಯಕ್ಷರು ,ಪದಾಧಿಕಾರಿಗಳು, ಉಪಸ್ಥಿತರಿದ್ದರು.

    ಭಾರತೀಯ ಜೈನ ಮಿಲನ್ ವಲಯ –8ರ ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್ ನಾಗರಾಜ್ ಸ್ವಾಗತಿಸಿದರು.  ಅರುಣ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

    ಮೈಸೂರು ವಿಭಾಗದ ನಿರ್ದೇಶಕರುಗಳಾದ ಎಚ್. ಡಿ. ಜಯಂದ್ರ , ಎಸ್.ವಿನೋದ್ ಕುಮಾರ್, ಅರುಣ್ ಪಂಡಿತ್. ಎಲ್ ,ವಿನೋದ್ ಬಾಕ್ಲಿ ವಾಲಾ, ರೂಪ ನಾಗರಾಜ್ , ಪ್ರಮೋದ್ ಕುಮಾರ್, ಎಸ್.ಎಸ್ .ಸೋಮಪ್ರಭ ,ಸಂಚಾಲಕರಾದ ಪದ್ಮ ಧನ್ಯ ಕುಮಾರ್,  ಜಯಲಲಿತ ಅನಿಲ್, ಪುಷ್ಪ ರಾಜೇಂದ್ರ, ವಾಗಿಶ್ವರಿ ಪ್ರಕಾಶ್, ಅಂಜನ ಸುದರ್ಶನ್, ವಾಣಿ ರತ್ನಾಕರ್, ಸುಮ ಸುನಿಲ್, ಮಹಾವೀರ್ ಸುದರ್ಶನ್, ಮಹೀಂದ್ರ ,ಜಿನೇಂದ್ರ ಪ್ರಕಾಶ್ ಸೇರಿದಂತೆ ಜೈನ್ ಮಿಲನ್ ಮೈಸೂರು , ಗಂಗೋತ್ರಿ ಜೈನ್ ಮಿಲನ್ ಮೈಸೂರು, ಮೈತ್ರಿ ಜೈನ್ ಮಿಲನ್ ಮೈಸೂರು. ವರ್ಧಮಾನ್ ಜೈನ್ ಮಿಲನ್ ಮೈಸೂರು. ಮಹಾವೀರ್ ಜೈನ್ ಮಿಲನ್ ಮೈಸೂರು, ಪ್ಯಾಲೇಸ್ ಸಿಟಿ ಜೈನ್ ಮಿಲನ್ ಮೈಸೂರು, ಸಂಯುಕ್ತ ಜೈನ್ ಮಿಲನ್ ಮೈಸೂರು, ಕಡಕೋಳ ಜೈನ್ ಮಿಲನ್ , ತ್ರಿಲೋಕ್ ಜೈನ್ ಮಿಲನ್ ಹಾಸನ, ರತ್ನತ್ರೆಯ ಜೈನ್ ಮಿಲನ್ ವೈನಾಡು ಕೇರಳ,  ದಿಗಂಬರ ಜೈನ ಸಮಾಜ ಮೈಸೂರು, ಪದ್ಮಶ್ರೀ ಮಹಿಳಾ ಜೈನ ಸಮಾಜ ಮೈಸೂರು, ಜೈನ್ ಬ್ರಾಹ್ಮಣ ಸಮಾಜ ಮೈಸೂರು , ಶಾಂತಿನಾಥ ಸೇವಾ ಸಮಿತಿ ಮೈಸೂರು ಸೇರಿದ್ದಂತೆ ಜೈನ ಸಂಘಟನೆಗಳ ಪದಾಧಿಕಾರಿಗಳು ಜೈನಮಿಲನ್ನು ಅಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ವಿಭಾಗದ ಎಲ್ಲ ನಿರ್ದೇಶಕರುಗಳು, ಸಂಚಾಲಕರುಗಳು ಮತ್ತು ಜೈ ನ್ ಮಿಲನ್ ಗಳ ಅಧ್ಯಕ್ಷರು ,ಕಾರ್ಯದರ್ಶಿಗಳು ,ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸೇರಿದಂತೆ  ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ

    July 26, 2026

    ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್

    July 26, 2026

    ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ

    July 25, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌

    July 26, 2026

    ತುಮಕೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ರಾಷ್ಟ್ರೀಯ…

    ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ

    July 26, 2026

    ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್

    July 26, 2026

    ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ

    July 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.