nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ

    December 31, 2025

    ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ

    December 31, 2025
    Facebook Twitter Instagram
    ಟ್ರೆಂಡಿಂಗ್
    • ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ
    • ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ
    • ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ
    • ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ: ಡಾ.ಸಿದ್ಧರಾಮಣ್ಣ ಕೆ.
    • ಸರ್ಕಾರಗಳಿಂದ ರೈತರ ಸಂಘಟನೆಗಳ ದುರುಪಯೋಗ: ಹೆಚ್.ಎ.ಜಯರಾಮಯ್ಯ
    • ತುಮಕೂರು: ಕನ್ನಡ ಶಾಲೆಗಳ ಬಲವರ್ಧನೆಗೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳ ಅಂಗೀಕಾರ
    • ಅಶ್ಲೀಲ ವಿಡಿಯೋ ನೋಡಿ ಅದೇ ರೀತಿ ಮಾಡಲು ಪೀಡಿಸುತ್ತಿದ್ದ ‘ಸೈಕೋ’ ಪತಿ; ಪೊಲೀಸ್ ಮೆಟ್ಟಿಲೇರಿದ ಪತ್ನಿ!
    • ಬೆಂಗಳೂರು: ಬಯೋಕಾನ್ ಕಂಪನಿಯ 5ನೇ ಮಹಡಿಯಿಂದ ಬಿದ್ದು ಉದ್ಯೋಗಿ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಪಿ.ಎಲ್.ಡಿ. ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಚಿಕ್ಕರಂಗಯ್ಯ ಆಯ್ಕೆ
    ಕೊರಟಗೆರೆ January 23, 2025

    ಕೊರಟಗೆರೆ ಪಿ.ಎಲ್.ಡಿ. ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಚಿಕ್ಕರಂಗಯ್ಯ ಆಯ್ಕೆ

    By adminJanuary 23, 2025No Comments2 Mins Read
    koratagere

    ವರದಿ:  ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ತಾಲ್ಲೂಕಿನ ಪಿ ಎಲ್‍ ಡಿ ಬ್ಯಾಂಕ್‍ ನ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ದಿವಂಗತ ಚನ್ನಿಗಪ್ಪನವರ ಆಪ್ತ ಶಿಷ್ಯರಾದ ಎನ್.ಚಿಕ್ಕರಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ಡಿ.ನಾಗರಾಜಯ್ಯ ಆಯ್ಕೆಯಾಗಿದ್ದಾರೆ.


    Provided by
    Provided by

    ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ ನಲ್ಲಿ ಒಟ್ಟು 14 ಸದಸ್ಯರಿದ್ದು ಒಬ್ಬರು ಸರ್ಕಾರದ ನಾಮ ನಿರ್ದೇಶನ ಸದಸ್ಯರಿರುತ್ತಾರೆ.

    ಜನವರಿ 22 ಬುಧವಾರದಂದು ಪಟ್ಟಣದ ಪಿಎಲ್‍ ಡಿ ಬ್ಯಾಂಕ್ ಕಛೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎನ್.ಡಿ.ಎ. ಪಕ್ಷದ ಬೆಂಬಲಿತ ಅಭ್ಯರ್ಥಿ ಚಿಕ್ಕರಂಗಯ್ಯ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಲ್.ಆನಂದ್ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು.

    ಅದೇ ರೀತಿ ಉಪಾದ್ಯಕ್ಷ ಸ್ಥಾನಕ್ಕೆ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿ ಬಿ.ಡಿ.ನಾಗರಾಜಯ್ಯ 8 ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆಂಚಮ್ಮ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು.

    ಕೊರಟಗೆರೆ ಕಾಂಗ್ರೆಸ್ ಗೆ ಆಘಾತ :

    ಪಿ ಎಲ್ ಡಿ ಬ್ಯಾಂಕ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮ ನಿರ್ದೇಶನ ಅಭ್ಯರ್ಥಿಯು ಸೇರಿ 9 ಜನರಿದ್ದು ಒಟ್ಟು 15 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನದಲ್ಲಿದ್ದರು ಆದರೆ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಚಿಕ್ಕರಂಗಯ್ಯ ಮತ್ತು ಬಿ.ಡಿ.ನಾಗರಾಜಯ್ಯ ಎನ್‍ಡಿಎ ಕೂಟ ಸೇರಿ 6 ಮತ್ತು 2 ಮತಗಳನ್ನು ಹೆಚ್ಚಿಗೆ ಮಾಡಿಕೊಂಡು ಬಂಡಾಯ ಬಾವುಟ ಆರಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಾದರು. ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಹಾಗೂ ಮುಖಂಡರ ಅತಿಯಾದ ಆತ್ಮ ವಿಶ್ವಾಸ ತಳಮಟ್ಟದಲ್ಲಿ ಕೆಲಸ ನಿರ್ವಹಿಸದೇ ಇರುವುದಕ್ಕೆ ಈ ಸೋಲಾಗಿದ್ದು ಇದೇ ಸೋಲು ತುಮಕೂರು ಹಾಲು ಉತ್ಪಾಧಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲೂ ಸಹ ಉಂಟಾಗಿದೆ ಎಂದು ಕೆಲವು ಕಾರ್ಯಕರ್ತರು ದೂರಿದ್ದಾರೆ.

     

    ನಮ್ಮ ಮುಖಂಡರ ಒಗ್ಗಟ್ಟು ಮತ್ತು ಶ್ರಮದಿಂದ ಹಾಗೂ ಬ್ಯಾಂಕ್‍ನ ನಿರ್ದೇಶಕರ ಬೆಂಬಲದಿಂದ ನಾವು ಈ ಚುನಾವಣೆಯಲ್ಲಿ ಜಯಗಳಿಸಿದ್ದು ರೈತರಿಗೆ ಹತ್ತಿರವಾದ ಈ ಬ್ಯಾಂಕ್‍ನಿಂದ ಹಲವು ಸೇವೆ ಸಲ್ಲಿಸಲಾಗುವುದು ಎಂದರು.

    —  ಸುಧಾಕರ್ ಲಾಲ್, ಮಾಜಿ ಶಾಸಕ.


    ನಮ್ಮ ಎನ್‍ ಡಿಎ ಮೈತ್ರಿಕೂಟ ಕೊರಟಗೆರೆಯಲ್ಲಿ ನಡೆಯುತ್ತಿರುವ ಹಲವು ಚುನಾವಣೆಗಳಲ್ಲಿ ಜಯಗಳಿಸುತ್ತಿದ್ದು ಮುಂಬರುವ ಎಲ್ಲಾ ಚುನಾವಣೆಯಲ್ಲೂ ಸಹ ನಮ್ಮ ಕಾರ್ಯಕರ್ತರ ಬಲದಿಂದ ಜಯಗಳಿಸುತ್ತೇವೆ ಅದೇ ರೀತಿ ರಾಜ್ಯದಲ್ಲಿ ಮತ್ತು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುತ್ತಿದ್ದು ಎನ್‍ಡಿಎ ಬಲ ಹೆಚ್ಚುತ್ತಿದೆ ಎಂದರು.

    —  ಅಂಜಿನಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ.


    ನನ್ನ ಈ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರುಗಳು ಕಾರಣವಾಗಿದ್ದು ಈ ಹಿಂದೆ ಚೆನ್ನಿಗಪ್ಪನವರ ಕಾಲದಲ್ಲಿ ಸಕ್ರಿಯವಾಗಿ ಜೆಡಿಎಸ್ ನಲ್ಲಿದ್ದೆ ಬದಲಾದ ಕಾಲದಲ್ಲಿ ಕಾಂಗ್ರೆಸ್‍ಗೆ ಬಂದು ಈಗ ಮತ್ತೆ ಜೆ.ಡಿ.ಎಸ್ ಸೇರಿಕೊಂಡಿದ್ದೇನೆ ಮುಂದೆ ಬ್ಯಾಂಕ್‍ನಲ್ಲಿ ಅಧ್ಯಕ್ಷನಾಗಿ ನಿಷ್ಟೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.

    —  ಎನ್.ಚಿಕ್ಕರಂಗಯ್ಯ. ನೂತನ ಅಧ್ಯಕ್ಷ.


    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನಿರ್ಲಕ್ಷ ಮತ್ತು ನನಗೆ ಗೌರವ ನೀಡದಿದ್ದಕ್ಕೆ ಮೂಲ ಕಾಂಗ್ರೆಸಿಗನಾದ ನಾನು ಜೆಡಿಎಸ್ ಪಕ್ಷ ಸೇರಿಕೊಂಡಿದ್ದು ಉಪಾಧ್ಯಕ್ಷನಾಗಿ ನನ್ನ ಕೆಲಸ ಮಾಡುತ್ತೇನೆ ಎಂದರು.

    —  ಬಿ.ಡಿ.ನಾಗರಾಜು, ನೂತನ ಉಪಾಧ್ಯಕ್ಷ.


    ಈ ಸಂದರ್ಭದಲ್ಲಿ ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ನಿರ್ದೇಶಕರುಗಳಾದ ಲಕ್ಷ್ಮೀನಾರಾಯಣ್,ಪ್ರಕಾಶ್, ಕಾಮಣ್ಣ,ರಂಗಯ್ಯ, ನೇತ್ರಾವತಿ, ರವೀಂದ್ರ ಹಾಗೂ ಮುಖಂಡರುಗಳಾದ ಕಾಮರಾಜು, ಮಾವತ್ತೂರು ಮಂಜುನಾಥ್, ಸಿದ್ದಮಲ್ಲಯ್ಯ, ಅಶ್ವತ್ಥ ನಾರಾಯಣ್‍, ರಾಜು, ಬೋರ್‍ವೆಲ್ ರಮೇಶ್, ಕಾಕಿಮಲ್ಲಣ್ಣ, ಸಿದ್ದರಾಜು, ಅಣ್ಣಪ್ಪ,ವಿನಯ್‍ ಕುಮಾರ್, ದೊಡ್ಡಯ್ಯ, ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ನಮ್ಮ ಊರು ಸ್ವಚ್ಛವಾಗಿಬೇಕು ಎಂದರೆ ಪಟ್ಟಣದ ಪೌರಕಾರ್ಮಿಕ ಕೊಡುಗೆ ದೊಡ್ಡದು:  ಪಿಎನ್‌ ಕೆ

    December 29, 2025

    ಅಟಲ್‌ ಜಿ ಆದರ್ಶಗಳು ಸದಾಕಾಲ ಪ್ರೇರಣೆ: ಕೇಂದ್ರ ಸಚಿವ ಸೋಮಣ್ಣ

    December 27, 2025

    ಪಿ.ಎನ್.ಕೃಷ್ಣ ಮೂರ್ತಿ ಹುಟ್ಟು ಹಬ್ಬ:   ಪೌರ ಕಾರ್ಮಿಕರಿಗೆ ಬೆಚ್ಚನೆಯ ಹೊದಿಕೆ ವಿತರಣೆ

    December 27, 2025

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ ಮಧುಗಿರಿಯಿಂದ ಕೇಳಿಬರುವ ಏಕತೆಯ ಮೌನ ಸಂದೇಶ ಧರ್ಮವು ಮಾನವನನ್ನು ಒಗ್ಗೂಡಿಸಬೇಕಾದ ಶಕ್ತಿಯಾಗಬೇಕಾದರೆ, ಅದು…

    ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ

    December 31, 2025

    ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ

    December 31, 2025

    ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ: ಡಾ.ಸಿದ್ಧರಾಮಣ್ಣ ಕೆ.

    December 31, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.