ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ತಾಲ್ಲೂಕಿನ ಪಿ ಎಲ್ ಡಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ದಿವಂಗತ ಚನ್ನಿಗಪ್ಪನವರ ಆಪ್ತ ಶಿಷ್ಯರಾದ ಎನ್.ಚಿಕ್ಕರಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ಡಿ.ನಾಗರಾಜಯ್ಯ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ಒಟ್ಟು 14 ಸದಸ್ಯರಿದ್ದು ಒಬ್ಬರು ಸರ್ಕಾರದ ನಾಮ ನಿರ್ದೇಶನ ಸದಸ್ಯರಿರುತ್ತಾರೆ.
ಜನವರಿ 22 ಬುಧವಾರದಂದು ಪಟ್ಟಣದ ಪಿಎಲ್ ಡಿ ಬ್ಯಾಂಕ್ ಕಛೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎನ್.ಡಿ.ಎ. ಪಕ್ಷದ ಬೆಂಬಲಿತ ಅಭ್ಯರ್ಥಿ ಚಿಕ್ಕರಂಗಯ್ಯ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಲ್.ಆನಂದ್ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು.
ಅದೇ ರೀತಿ ಉಪಾದ್ಯಕ್ಷ ಸ್ಥಾನಕ್ಕೆ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿ ಬಿ.ಡಿ.ನಾಗರಾಜಯ್ಯ 8 ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆಂಚಮ್ಮ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು.
ಕೊರಟಗೆರೆ ಕಾಂಗ್ರೆಸ್ ಗೆ ಆಘಾತ :
ಪಿ ಎಲ್ ಡಿ ಬ್ಯಾಂಕ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮ ನಿರ್ದೇಶನ ಅಭ್ಯರ್ಥಿಯು ಸೇರಿ 9 ಜನರಿದ್ದು ಒಟ್ಟು 15 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನದಲ್ಲಿದ್ದರು ಆದರೆ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಚಿಕ್ಕರಂಗಯ್ಯ ಮತ್ತು ಬಿ.ಡಿ.ನಾಗರಾಜಯ್ಯ ಎನ್‍ಡಿಎ ಕೂಟ ಸೇರಿ 6 ಮತ್ತು 2 ಮತಗಳನ್ನು ಹೆಚ್ಚಿಗೆ ಮಾಡಿಕೊಂಡು ಬಂಡಾಯ ಬಾವುಟ ಆರಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಾದರು. ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಹಾಗೂ ಮುಖಂಡರ ಅತಿಯಾದ ಆತ್ಮ ವಿಶ್ವಾಸ ತಳಮಟ್ಟದಲ್ಲಿ ಕೆಲಸ ನಿರ್ವಹಿಸದೇ ಇರುವುದಕ್ಕೆ ಈ ಸೋಲಾಗಿದ್ದು ಇದೇ ಸೋಲು ತುಮಕೂರು ಹಾಲು ಉತ್ಪಾಧಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲೂ ಸಹ ಉಂಟಾಗಿದೆ ಎಂದು ಕೆಲವು ಕಾರ್ಯಕರ್ತರು ದೂರಿದ್ದಾರೆ.
ನಮ್ಮ ಮುಖಂಡರ ಒಗ್ಗಟ್ಟು ಮತ್ತು ಶ್ರಮದಿಂದ ಹಾಗೂ ಬ್ಯಾಂಕ್‍ನ ನಿರ್ದೇಶಕರ ಬೆಂಬಲದಿಂದ ನಾವು ಈ ಚುನಾವಣೆಯಲ್ಲಿ ಜಯಗಳಿಸಿದ್ದು ರೈತರಿಗೆ ಹತ್ತಿರವಾದ ಈ ಬ್ಯಾಂಕ್‍ನಿಂದ ಹಲವು ಸೇವೆ ಸಲ್ಲಿಸಲಾಗುವುದು ಎಂದರು.
— ಸುಧಾಕರ್ ಲಾಲ್, ಮಾಜಿ ಶಾಸಕ.
ನಮ್ಮ ಎನ್ ಡಿಎ ಮೈತ್ರಿಕೂಟ ಕೊರಟಗೆರೆಯಲ್ಲಿ ನಡೆಯುತ್ತಿರುವ ಹಲವು ಚುನಾವಣೆಗಳಲ್ಲಿ ಜಯಗಳಿಸುತ್ತಿದ್ದು ಮುಂಬರುವ ಎಲ್ಲಾ ಚುನಾವಣೆಯಲ್ಲೂ ಸಹ ನಮ್ಮ ಕಾರ್ಯಕರ್ತರ ಬಲದಿಂದ ಜಯಗಳಿಸುತ್ತೇವೆ ಅದೇ ರೀತಿ ರಾಜ್ಯದಲ್ಲಿ ಮತ್ತು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುತ್ತಿದ್ದು ಎನ್‍ಡಿಎ ಬಲ ಹೆಚ್ಚುತ್ತಿದೆ ಎಂದರು.
— ಅಂಜಿನಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ.
ನನ್ನ ಈ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರುಗಳು ಕಾರಣವಾಗಿದ್ದು ಈ ಹಿಂದೆ ಚೆನ್ನಿಗಪ್ಪನವರ ಕಾಲದಲ್ಲಿ ಸಕ್ರಿಯವಾಗಿ ಜೆಡಿಎಸ್ ನಲ್ಲಿದ್ದೆ ಬದಲಾದ ಕಾಲದಲ್ಲಿ ಕಾಂಗ್ರೆಸ್‍ಗೆ ಬಂದು ಈಗ ಮತ್ತೆ ಜೆ.ಡಿ.ಎಸ್ ಸೇರಿಕೊಂಡಿದ್ದೇನೆ ಮುಂದೆ ಬ್ಯಾಂಕ್‍ನಲ್ಲಿ ಅಧ್ಯಕ್ಷನಾಗಿ ನಿಷ್ಟೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.
— ಎನ್.ಚಿಕ್ಕರಂಗಯ್ಯ. ನೂತನ ಅಧ್ಯಕ್ಷ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನಿರ್ಲಕ್ಷ ಮತ್ತು ನನಗೆ ಗೌರವ ನೀಡದಿದ್ದಕ್ಕೆ ಮೂಲ ಕಾಂಗ್ರೆಸಿಗನಾದ ನಾನು ಜೆಡಿಎಸ್ ಪಕ್ಷ ಸೇರಿಕೊಂಡಿದ್ದು ಉಪಾಧ್ಯಕ್ಷನಾಗಿ ನನ್ನ ಕೆಲಸ ಮಾಡುತ್ತೇನೆ ಎಂದರು.
— ಬಿ.ಡಿ.ನಾಗರಾಜು, ನೂತನ ಉಪಾಧ್ಯಕ್ಷ.
ಈ ಸಂದರ್ಭದಲ್ಲಿ ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ನಿರ್ದೇಶಕರುಗಳಾದ ಲಕ್ಷ್ಮೀನಾರಾಯಣ್,ಪ್ರಕಾಶ್, ಕಾಮಣ್ಣ,ರಂಗಯ್ಯ, ನೇತ್ರಾವತಿ, ರವೀಂದ್ರ ಹಾಗೂ ಮುಖಂಡರುಗಳಾದ ಕಾಮರಾಜು, ಮಾವತ್ತೂರು ಮಂಜುನಾಥ್, ಸಿದ್ದಮಲ್ಲಯ್ಯ, ಅಶ್ವತ್ಥ ನಾರಾಯಣ್, ರಾಜು, ಬೋರ್‍ವೆಲ್ ರಮೇಶ್, ಕಾಕಿಮಲ್ಲಣ್ಣ, ಸಿದ್ದರಾಜು, ಅಣ್ಣಪ್ಪ,ವಿನಯ್ ಕುಮಾರ್, ದೊಡ್ಡಯ್ಯ, ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4