ಕೊರಟಗೆರೆ : ಲೈಸೆನ್ಸ್ ಇಲ್ಲದೆ ನಾಡ ಬಂದೂಕು ಹೊಂದಿದ್ದ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣೆ ಗ್ರಾಮದ ಮಂಜೇಶ್ ಬಿ.ಎಸ್(22) ಮತ್ತು ನರಸಿಂಹಮೂರ್ತಿ(40) ಬಂಧಿತ ಆರೋಪಿಗಳು . ಬಂಧಿತರಿಂದ ಎರಡು ನಾಡ ಬಂದೂಕು ಮತ್ತು 15 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಡೋಣೆ ಗ್ರಾಮದ ಮಂಜೇಶ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಬಂದೂಕು ಮತ್ತು ಸಿಡಿ ಮದ್ದುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.
ಸಿಪಿಐ ಸಿದ್ದರಾಮೇಶ್ವರ ಪಿಎಸ್ ಐ ನಾಗರಾಜು.ಬಿ ಮತ್ತು ಸಿಬ್ಬಂದಿಗಳಾದ ಧರ್ಮ ಪಾಲನಾಯಕ್, ಮೋಹನ್, ನಜರುಲ್ಲಾ, ದಯಾನಂದ್, ಗಂಗಾಧರಪ್ಪ, ನರಸಿಂಹಮುರ್ತಿ, ಸೈಯದ್, ದೊಡ್ಡಲಿಂಗಯ್ಯ ದಾಳಿನಡೆಸಿ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz